ಸುದ್ಧಿಕನ್ನಡ ವಾರ್ತೆ

Goa: ಗೋವಾ ರಾಜ್ಯಕ್ಕೆ ಪ್ರಮುಖವಾಗಿ ಹೊರ ರಾಜ್ಯಗಳಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಆಗಮಿಸುತ್ತಾರೆ. ಗೋವಾದಲ್ಲಿ ಸದ್ಯ ಅಪರಾಧ ಪ್ರಕರಣ ಹೆಚ್ಚುತ್ತಿದೆ, ಗೋವಾದ ವಿವಿಧೆಡೆ ಕಳ್ಳತನ, ಕೊಲೆ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಗೋವಾ ಸತ್ತರಿ ತಾಲೂಕಿನಲ್ಲಿ ವಲಸೆ ಕಾರ್ಮಿಕರ ಪರಿಶೀಲನೆ ಪ್ರಕ್ರಿಯೆಯನ್ನು ವಾಳಪೈ ಪೊಲೀಸ್ ಠಾಣೆಯಿಂದ ಶನಿವಾರದಿಂದ ಆರಂಭಿಸಲಾಗಿದೆ. ವಾಳಪೈ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ವಿದೇಶ್ ಶಿರೋಡ್ಕರ್ ಅವರ ಮಾರ್ಗದರ್ಶನದಲ್ಲಿ ವಾಳಪೈ ಪಟ್ಟಣಗಳಲ್ಲಿ ಈ ಪರಿಶೀಲನೆ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.

ಗೋವಾದ ಸತ್ತರಿ ತಾಲೂಕಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರಿದ್ದಾರೆ. ವಿಶೇಷವಾಗಿ ಬಿಹಾರ, ಉತ್ತರ ಪ್ರದೇಶ, ಜಾಖರ್ಂಡ್, ಕರ್ನಾಟಕ, ಒರಿಸ್ಸಾದಿಂದ ವಾಳಪೈ ನಗರ ಮತ್ತು ಗ್ರಾಮಾಂತರ ಪ್ರದೇಶದ ಕಾರ್ಮಿಕರು ಮತ್ತು ಆಯಾ ಮನೆ ಮಾಲೀಕರು ತಮ್ಮ ಬಿ ಫಾರ್ಮ್ ಅನ್ನು ಭರ್ತಿ ಮಾಡಿ ವಾಳಪೈ ಪೊಲೀಸ್ ಠಾಣೆಗೆ ವಿವರವಾದ ಮಾಹಿತಿಯನ್ನು ನೀಡಬೇಕು. ಆದರೆ ಈ ಪ್ರಕ್ರಿಯೆಯೇ ನಡೆಯುತ್ತಿಲ್ಲ ಎಂದು ಗಮನಿಸಲಾಗಿದೆ. ಕಾರ್ಮಿಕರ ಮಾಹಿತಿ ಮರೆಮಾಚುವ ಬಾಡಿಗೆ ಮನೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೋಲಿಸ್ ಅಧಿಕಾರಿಗಳು ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಇನ್ಸ್‍ಪೆಕ್ಟರ್ ವಿದೇಶ್ ಶಿರೋಡ್ಕರ್- ಗೋವಾದ ಸತ್ತರಿ ತಾಲೂಕಿನಲ್ಲಿ ಹಾಗೂ ವಾಳಪೈ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಕಾರ್ಮಿಕರ ಮಾಹಿತಿ ಪೊಲೀಸ್ ಠಾಣೆಗೆ ಅಗತ್ಯವಾಗಿದೆ. ಬಹುತೇಕ ಕಾರ್ಮಿಕರ ಪರಿಶೀಲನೆ ಪ್ರಕ್ರಿಯೆ ಶನಿವಾರ ಪೂರ್ಣಗೊಂಡಿದೆ. ಈ ಪ್ರಕ್ರಿಯೆಯನ್ನು ನಿರಂತರವಾಗಿ ಪ್ರಾರಂಭಿಸಲಾಗುವುದು. ಆದಾಗ್ಯೂ, ಅನೇಕ ಮನೆ ಮಾಲೀಕರು ತಮ್ಮ ಮನೆಗಳಲ್ಲಿ ಬಾಡಿಗೆಯಲ್ಲಿ ಉಳಿದುಕೊಂಡಿರುವ ಕಾರ್ಮಿಕರ ಬಗ್ಗೆ ಮಾಹಿತಿಯನ್ನು ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಪೋಲಿಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

             ಬಾಂಗ್ಲಾದೇಶಿ ನುಸುಳುಕೋರರು
ಗೋವಾದ ವಾಳಪೈ ಪಟ್ಟಣದಲ್ಲಿ, ಬಾಂಗ್ಲಾದೇಶಿ ನುಸುಳುಕೋರರು ಸುಮಾರು ಒಂದು ವರ್ಷದ ಹಿಂದೆ ಪುರಸಭೆಯ ಸರಹದ್ದಿನ ಪ್ರದೇಶದಲ್ಲಿ ಕಂಡುಬಂದರು. ಅಲ್ಲದೆ ಸದ್ಯದ ಪರಿಸ್ಥಿತಿಯಲ್ಲಿ ವಾಳಪೈ ನಗರಗಳಲ್ಲಿ ಬಾಂಗ್ಲಾದೇಶಿ ನುಸುಳುಕೋರರು ಇರುವ ಸಾಧ್ಯತೆ ಇದೆ. ಹೀಗಾಗಿ ಬಾಂಗ್ಲಾ ನುಸುಳುಕೋರರ ವಿರುದ್ಧ ವಾಲ್ಪೈ ಪೊಲೀಸರು ತನಿಖೆ ನಡೆಸಬೇಕು ಎಂಬುದು ಜನತೆಯ ಆಗ್ರಹವಾಗಿದೆ.