ಸುದ್ಧಿಕನ್ನಡ ವಾರ್ತೆ
ದೆಹಲಿಯಿಂದ ಗೋವಾಕ್ಕೆ ಬರುತ್ತಿದ್ದ ಇಂಡಿಯೋ ವಿಮಾನ ಮುಂಬಯಿ ವಿಮಾನ ನಿಲ್ದಾಣದಲ್ಲಿ ಎಮರ್ಜನ್ಸಿ ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ವಿಮಾನದ ಪೈಲಟ್ ಪ್ಯಾನ್ ಪ್ಯಾನ್ ಪ್ಯಾನ್ ಎಂಬ ಸಂದೇಶ ನೀಡಿದ್ದ. ಈ ವಿಮಾನವು ದೆಹಲಿಯಿಂದ 191 ಪ್ರಯಾಣಿಕರನ್ನು ಕರೆದುಕೊಂಡು ಈ ವಿಮಾನವು ಗೋವಾಕ್ಕೆ ಬರುತ್ತಿತ್ತು.

ದೆಹಲಿಯಿಂದ ಗೋವಾಕ್ಕೆ ಬರುತ್ತಿದ್ದ ಇಂಡಿಗೊ ವಿಮಾನ ಬುಧವಾರ ರಾತ್ರಿ ಮುಂಬಯಿಯಲ್ಲಿ ಎರ್ಜನ್ಸಿ ಲ್ಯಾಂಡಿಂಗ್ ಮಾಡಲಾಗಿದೆ. ಇಂಡಿಗೊ 6ಇ6271 ವಿಮಾನದಲ್ಲಿ 191 ಪ್ರಯಾಣಿಕರು ದೆಹಲಿಯಿಂದ ಗೋವಾಕ್ಕೆ ಪ್ರಯಾಣ ಬೆಳೆಸಿದ್ದರು. ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಮುಂಬಯಿ ವಿಮಾನ ನಿಲ್ದಾಣದಲ್ಲಿ ಎಮರ್ಜನ್ಸಿ ಲ್ಯಾಂಡಿ ಮಾಡಲಾಗಿದೆ.

ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 191 ಪ್ರಯಾಣಿಕರನ್ನು ಕರೆದುಕೊಂಡು ಇಂಡಿಗೋ ವಿಮಾನವು ಗೋವಾದ ಮನೋಹರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿತ್ತು. ವಿಮಾನದಲ್ಲಿ ಮಾರ್ಗಮಧ್ಯದಲ್ಲಿ ತಾಂತ್ರಿಕ ದೋಷ ಕಂಡುಬಂತು. ಈ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ 9.53 ರ ಸುಮಾರು ವಿಮಾನವನ್ನು ಸುರಕ್ಷಿತವಾಗಿ ಮುಂಬಯಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಪೈಲಟ್ ಪ್ಯಾನ್ ಪ್ಯಾನ್ ಪ್ಯಾನ್ ಎಂಬ ಸಂದೇಶ ಕಳುಹಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ವಿಮಾನದ ಪೈಲಟ್ ನೀಡಿರುವ ಪ್ಯಾನ್ ಪ್ಯಾನ್ ಪ್ಯಾನ್ ಸಂದೇಶವು ತುರ್ತು ಸಂದೇಶವಾಗಿದೆ. ಆತಂಕವಿದೆ ಎಂಬ ಎಮರ್ಜನ್ಸಿ ಸಂದೇಶ ಇದಾಗಿದೆ. ಎಂಜಿನ್ ಕ್ರಮಾಂಕ 1 ರಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಈ ಸಂದೇಶ ನೀಡಲಾಗಿತ್ತು.

ವಿಮಾನವು ಗೋವಾಕ್ಕೆ ಆಗಮಿಸುವಾಗ ಮಾರ್ಗಮಧ್ಯದಲ್ಲಿ ತಾಂತ6ರಿಕ ದೋಷ ಕಂಡುಬಂದಿದ್ದರಿಂದ ಮುಂಬಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಮರ್ಜನ್ಸಿ ಲ್ಯಾಂಡ್ ಮಾಡಲಾಗಿದೆ ಎಂದು ಇಂಡಿಗೋ ವಿಮಾನ ಕಂಪನಿಯ ಮಾಹಿತಿ ನೀಡಿದೆ.

ಈ ತುರ್ತು ಸಂದೇಶದ ನತರ ಮುಂಬಯಿ ವಿಮಾನ ನಿಲ್ದಾಣದಲ್ಲಿ ನಿಯಮಾನುಸಾರ ಅಂಬುಲೆನ್ಸ, ಅಗ್ನಿಶಾಮಕ ದಳ ಸಜ್ಜಾಗಿತ್ತು. ರಾತ್ರಿ 9.53 ರ ಸುಮಾರು ಸುರಕ್ಷಿತವಾಗಿ ವಿಮಾನವನ್ನು ಲ್ಯಾಂಡ್ ಮಾಡಲಾಗಿದೆ. ನಂತರ ವಿಆನದ ಅಗತ್ಯ ತಪಾಸಣಾ ಕಾರ್ಯ ಕೈಗೊಳ್ಳಲಾಗಿದೆ.