ಸುದ್ಧಿಕನ್ನಡ ವಾರ್ತೆ
ಗೋವಾದಲ್ಲಿ ಮಳೆಗಾಲದ ಪ್ರವಾಸೋದ್ಯಮದ ವಿಶೇಷ ಆಕರ್ಷಣೆಯಾಗಿರುವ ಮಹದಾಯಿ ನದಿಯ ವಾಟರ್ ರ್ಯಾಪ್ಟಿಂಗ್ ಆರಂಭಗೊಳಿಸುವುದಾಗಿ ಸರ್ಕಾರ ಘೋಷಿಸಿದೆ. 10 ಕಿ.ಮಿ ದೂರದ ವರೆಗಿನ ವಾಟರ್ ರ್ಯಾಪ್ಟಿಂಗ್ (Rapting )ಇದಾಗಿದ್ದು, ಈ ಮೂಲಕ ಗೋವಾಕ್ಕೆ ಇನ್ನಷ್ಟು ಹೆಚ್ಚು ಪ್ರವಾಸಿಗರು ಆಕರ್ಷತರಾಗುವ ನಿರೀಕ್ಷೆ ವ್ಯಕ್ತವಾಗಿದೆ.
ಗೋವಾದಲ್ಲಿ ಸದ್ಯ ಪ್ರತಿದಿನ ಎರಡು ವಾಟರ್ ರ್ಯಾಪ್ಟಿಂಗ್ (Rapting ) ಟ್ರಿಪ್ ಆಯೋಜಿಸಲಾಗುತ್ತಿದೆ. ಗೋವಾ ಪ್ರವಾಸೋದ್ಯಮ ವಿಕಾಸ ಮಹಾಮಂಡಳ ಹಾಗೂ ಸದರ್ನ ರಿವರ್ ಅಡ್ವೆಂಚರ್ಸ ಎಂಡ್ ಸ್ಪೋಟ್ಸ ಪ್ರೈಲಿ ಇವರು ಜಂಟಿಯಾಗಿ ವಾಟರ್ ರ್ಯಾಪ್ಟಿಂಗ್ ಆಯೋಜಿಸಲಾಗಿದೆ. ಪ್ರತಿ ಟ್ರಿಪ್ ನ್ನು ಕೂಡ ಪ್ರಮಾಣಿತ ಮಾರ್ಗದರ್ಶಕರ ಉಪಸ್ಥಿತಿಯಲ್ಲಿಯೇ ನಡೆಸಲಾಗುವುದು. ಆ ಸಂದರ್ಭದಲ್ಲಿ ಸಂಪೂರ್ಣ ಸುರಕ್ಷತೆಯ ಮಾರ್ಗದರ್ಶನ ನೀಡಲಾಗುವುದು. ಲೈಫ್ ಜಾಕೇಟ್, ಹೆಲ್ಮೆಟ್, ಎಲ್ಲ ಸುರಕ್ಷಾ ಕ್ರಮವನ್ನು ಪ್ರಮಾಣಿತ ಅಧಿಕಾರಿಗಳಿಂದ ತಪಾಸಣೆ ನಡೆಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗೋವಾ ರಾಜ್ಯವು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಲ್ಲಿನ ಸುಂದರ ಪ್ರವಾಸಿ ತಾಣಗಳು ಪ್ರವಾಸಿಗರ ಆಕರ್ಷಿಸುತ್ತವೆ. ಅಂತೆಯೆ ವಾಟರ್ ರ್ಯಾಪ್ಟಿಂಗ್ ಕೂಡ ಇನ್ನಷ್ಟು ಹೊಸ ಸಾಹಸಿ ಪ್ರವಾಸಿಗರನ್ನು ಗೋವಾಕ್ಕೆ ಆಕರ್ಷಿಸುವ ನಿರೀಕ್ಷೆಯಿದೆ.