ಸುದ್ಧಿಕನ್ನಡ ವಾರ್ತೆ
ಪಣಜಿ ಸಮೀಪದ ಬಾಂಬೋಲಿಂ ಕುಜಿರಾ-ಸಾಂತಾಕ್ರೂಜ್ ನಲ್ಲಿರುವ ವಸತಿ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ವ್ಯಕ್ತಿಯೊಬ್ಬರು ಶನಿವಾರ ಮಧ್ಯಾಹ್ನ 1.45 ರ ಸುಮಾರಿಗೆ ಸಾವನ್ನಪ್ಪಿದ್ದಾರೆ. ಆ ವ್ಯಕ್ತಿಯನ್ನು ಜಿತು ತೇಲೇಕರ್ (50, ಮುಂಬೈ-ಮಹಾರಾಷ್ಟ್ರ) ಎಂದು ಗುರುತಿಸಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಓಲ್ಡ ಗೋವಾ ಪೆÇಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಸಾವಿನ ತನಿಖೆ ನಡೆಸಿದ್ದಾರೆ. ಜಿತು ತೇಲೇಕರ್ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ನಾಲ್ಕನೇ ಮಹಡಿಯಿಂದ ಹಾರಿರಬಹುದು ಎಂದು ಕೂಡ ಶಂಕಿಸಲಾಗಿದೆ.
ಓಲ್ಡ ಗೋವಾ ಪೆÇಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಸತೀಶ್ ಪದ್ವಾಲ್ಕರ್ ಮತ್ತು ಸಬ್-ಇನ್‍ಸ್ಪೆಕ್ಟರ್ ಸಂಕೇತ್ ಪೆÇೀಕ್ರೆ ಅವರ ಮಾರ್ಗದರ್ಶನದಲ್ಲಿ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗೋವಾ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಕಳುಹಿಸಲಾಗಿದ್ದು, ಈ ಪ್ರಕರಣದಲ್ಲಿ ಎಲ್ಲಾ ವಿಧಗಳಲ್ಲಿ ತನಿಖೆ ಮಾಡಲಾಗುತ್ತಿದೆ ಎಂದು ಪೆÇಲೀಸರು ಸ್ಪಷ್ಟಪಡಿಸಿದ್ದಾರೆ.