ಸುದ್ಧಿಕನ್ನಡ ವಾರ್ತೆ
ಗೋವಾದ ಹರಮಲ್ ಅಗರವಾಡಾದಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ರಾತ್ರಿ ಚಿರತೆಯೊಂದು ಹಾರಿದ್ದರಿಂದ ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿದೆ. ಈ ಪರಿಸರದಲ್ಲಿ ಪದೆ ಪದೆ ಚಿರತೆ ಜನವಸತಿ ಪ್ರದೇಶಕ್ಕೆ ಬರುತ್ತಿದ್ದು ಜನತೆ ಕಂಗಾಲಾಗಿದ್ದಾರೆ. ಇದೀಗ ಈ ಘಟನೆಯಿಂದಾಗಿ ರಾತ್ರಿಯ ವೇಳೆ ಬೈಕ್ ನಲ್ಲಿ ಓಡಾಟ ನಡೆಸಲು ಜನತೆ ಭಯಪಡುವಂತಾಗಿದೆ.

ಹೋಟೆಲ್ ಮ್ಯಾನೆಜ್ಮೆಂಟ್ ಕೋರ್ಸ ಮಾಡುತ್ತಿದ್ದ ವಿದ್ಯಾರ್ಥಿ ಅಸಫ ನಿಕೋಲಸ್ (24) ಈತ ಬೈಕ್ ನಲ್ಲಿ ರಾತ್ರಿ ಹರಮಲ್ ನಿಂದ ಚೋಪಡೆಗೆ ಬರುತ್ತಿದ್ದ. ಅಗರವಾಡಾ ಬಂದು ತಲುಪಿದ ನಂತರ ಒಂದು ಘಟ್ಟದ ರಸ್ತೆಯಲ್ಲಿ ಕಾಡಿನ ಭಾಗದಿಂದ ಚಿರತೆಯೊಂದು ಹಾರಿದೆ. ಇದರಿಂದಾಗಿ ಬೈಕ್ ಸವಾರ ರಸ್ತೆ ಬದಿಗೆ ಹೋಗಿ ಬಿದ್ದ. ಈ ಘಟನೆಯಿಂದಾಗಿ ಚಿರತೆ ಕೂಡ ಗಾಬರಿಗೊಂಡು ಓಡಿಹೋಗಿದೆ. ಅಲ್ಲಯೇ ಪಕ್ಕದಲ್ಲಿದ್ದ ಹೋಟೆಲ್ ನಿಂದ ಜನ ಓಡಿ ಬಂದು ರಸ್ತೆ ಬದಿಯಲ್ಲಿ ಬಿದ್ದಿದ್ದ ವಿದ್ಯಾರ್ಥಿಯನ್ನು ಮೇಲಕ್ಕೆತ್ತಿದರು. ಈತ ಹೆಲ್ಮೆಟ್ ಧರಿಸಿದ್ದ ತಲೆಗೆ ಪೆಟ್ಟಾಗಲಿಲ್ಲ ಎನ್ನಲಾಗಿದೆ.

ಆದರೆ ಈ ಘಟನೆಯಲ್ಲಿ ಬೈಕ್ ಕೂಡ ಹೆಚ್ಚಿನ ಹಾನಿ ಸಂಭವಿಸಿದೆ. ಜನವಸತಿ ಪ್ರದೇಶದಲ್ಲಿ ಚಿರತೆ ಬರುತ್ತಿದ್ದು, ಜನತೆ ಆತಂಕಗೊಂಡಿದ್ದಾರೆ. ಚಿರತೆಯನ್ನು ಅರಣ್ಯ ಇಲಾಖೆಯವರು ಸೆರೆ ಹಿಡಿಯಬೇಕು ಎಂದು ಆಘ್ರಹ ವ್ಯಕ್ತವಾಗುತ್ತಿದೆ.