ಸುದ್ಧಿಕನ್ನಡ ವಾರ್ತೆ

Goa: ಗೋವಾ ವಾಸ್ಕೊ ನವೆವಾಡೆ ಹೌಸಿಂಗ್ ಬೋರ್ಡ ನಲ್ಲಿರುವ 545 ಮನೆಗಳನ್ನು ಗೋವಾ ಗೃಹನಿರ್ಮಾಣ ಮಹಾಮಂಡಳ ಸಕ್ರಮ ಗೊಳಿಸಲಿದೆ ಎಂದು ಪಂಚಾಯತ ಮಂತ್ರಿ ಮಾವಿನ್ ಗುದಿನ್ಹೊ ಮಾಹಿತಿ ನೀಡಿದ್ದಾರೆ. ಈ ಮನೆಗಳು ಸುಮಾರು 40 ವರ್ಷಗಳಷ್ಟು ಹಳೇಯ ಮನೆಗಳಾಗಿದ್ದು, ಇಲ್ಲಿನ ನಿವಾಸಿಗಳು ನಮನೆಗಳನ್ನು ಸಕ್ರಮಗೊಳಿಸಲು ಹಲವು ಬಾರಿ ಪ್ರಯತ್ನಿಸಿದ್ದರು. ಆದರೆ ಕೆಲ ತಾಂತ್ರಿಕ ಕಾರಣಗಳಿಂದ ಈ ಮನೆಗಳನ್ನು ಸಕ್ರಮಗೊಳಿಸಲಾಗುತ್ತಿದೆ. ಆದರೆ ಇದೀಗ ಶೀಘ್ರವೇ ಗೋವಾ ಗೃಹ ನಿರ್ಮಾಣ ಮಹಾಮಂಡಳದ ವತಿಯಿಂದ 545 ಮನೆಗಳನ್ನು ಸಕ್ರಮಗೊಳಿಸಲಾಗುವುದು ಎಂದು ಸಚಿವ ಮಾವಿನ್ ಗುದಿನ್ಹೊ ಮಾಹಿತಿ ನೀಡಿದರು.

ಗೋವಾ ಗೃಹ ನಿರ್ಮಾಣ ಮಹಾಮಂಡಳದ ಅಧ್ಯಕ್ಷ ಜೀತ್ ಅರೋಲಕರ್ ಹಾಗೂ ಮಹಾಮಂಡಳದ ಪದಾಧಿಕಾರಿಗಳೊಂದಿಗೆ ಸಚಿವ ಮಾವಿನ್ ಗುದಿನ್ಹೊ ರವರು ನವೆವಾಡೆ ಹೌಸಿಂಗ್ ಬೋರ್ಡ ಪ್ರದೇಶಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಚಿವ ಮಾವಿನ್ ಗುದಿನ್ಹೊ ಮಾತನಾಡಿ- ಕಳೆದ ಸುಮಾರು 40 ವರ್ಷಗಳಿಂದ ಇಲ್ಲಿನ ಮನೆ ಮಾಲೀಕರು ತಮ್ಮ ಮನೆಗಳನ್ನು ಸಕ್ರಮಗೊಳಿಸಲು ಸರ್ಕಾರಿ ಕಾರ್ಯಾಲಯಗಳಿಗೆ ಸುತ್ತಾಡಿ ಹೆಚ್ಚಿನ ಪ್ರಯತ್ನ ನಡೆಸಿದ್ದರು. ಆದರೆ ಕೆಲ ತಾಂತ್ರಿಕ ಕಾರಣಗಳಿಂದಾಗಿ ಈ ಮನೆಗಳು ಸಕ್ರಮಗೊಳಿಸಲು ಅಡಚಣಿಯಾಗುತ್ತಿತ್ತು. ಇದೀಗ ಎಲ್ಲ ಅಡಚಣಿಗಳು ದೂರವಾಗಿದ್ದು ಮನೆ ಮಾಲೀಕರಿಗೆ ಶೀಘ್ರದಲ್ಲಿಯೇ ನ್ಯಾಯ ಲಭಿಸಲಿದೆ ಎಂದು ಸಚಿವ ಮಾವಿನ್ ಗುದಿನ್ಹೊ ನುಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗೋವಾ ಗೃಹನಿರ್ಮಾಣ ಮಹಾಮಂಡಳದ ಅಧ್ಯಕ್ಷ ಜೀತ್ ಅರೋಲ್ಕರ್ ಮಾತನಾಡಿ- ಪ್ರತಿಯೊಬ್ಬ ನಾಗರೀಕರಿಗೂ ಮನೆ ಲಭಿಸುವಂತೆ ಮಾಡುವುದು ರಾಜ್ಯ ಸರ್ಕಾರದ ಪ್ರಯತ್ನವಾಗಿದೆ. ಗೋವಾದ ದಾಬೋಲಿಂ -ನವೆವಾಡೆ ಹೌಸಿಂಗ್ ಬೋರ್ಡನಲ್ಲಿರುವ 545 ಮನೆಗಳನ್ನು ಸಕ್ರಮಗೊಳಿಸಲು ಸರ್ಕಾರಿ ಮಟ್ಟದಲ್ಲಿ ಕಳೆದ ಅನೇಕ ವರ್ಷಗಳಿಂದ ಪ್ರಯತ್ನ ನಡೆಯುತ್ತಿತ್ತು. ಈ ಪ್ರಯತ್ನಕ್ಕೆ ಸದ್ಯ ಯಶಸ್ಸು ಲಭಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಇಲ್ಲಿರು 545 ಮನೆಗಳನ್ನು ಸಕ್ರಮಗೊಳಿಸಲಾಗುವುದು ಎಂಬ ಮಾಹಿತಿ ನೀಡಿದರು.