ಸುದ್ಧಿಕನ್ನಡ ವಾರ್ತೆ
ಕಳೆದ ಕೆಲ ದಿನಗಳಿಂದ ಗೋವಾ-ಬೆಳಗಾವಿ ಮಾರ್ಗದಲ್ಲಿ ಓಡಾಟ ನಡೆಸುಯವ ವಾಹನ ಸವಾರರು ದಾರಿ ಯಾವುದಯ್ಯಾ ಬೆಳಗಾವಿ-ಗೋವಾಕ್ಕೆ ದಾರಿ ಯಾವುದಯ್ಯಾ ಎಂದು ಹಾಡು ಹಾಡುವಂತಾಗಿದೆ. ಅನಮೋಡ ಘಾಟ್ ರಸ್ತೆಯು ಗೋವಾ -ಬೆಳಗಾವಿ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಆದರೆ ಘಾಟದ ರಸ್ತೆಯಲ್ಲಿ ಭೂಕುಸಿತ, ರಸ್ತೆ ದುರಸ್ತಿ ಕಾರ್ಯಗಳು ಪದೆ ಪದೆ ನಡೆಯುವಂತಾಗುತ್ತಿರುವುದರಿಂದ ವಾಹನಗಳ ಓಡಾಟಕ್ಕೆ ಹೆಚ್ಚಿನ ತೊಂದರೆಯುಂಟಾಗುವಂರಾಗುತ್ತಿದೆ. ಗೋವಾ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಅನಮೋಡ ಘಾಟ್ ರಸ್ತೆಯ ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಅನೋಡ ರಸ್ತೆಯಲ್ಲಿ ಒಂದೇ ಮಾರ್ಗದಲ್ಲಿ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗಿತ್ತು. ಇದರಿಂದಾಗಿ ಭಾರಿ ವಾಹನ ದಟ್ಟಣೆಯುಂಟಾಗುತ್ತಿದೆ. ಈ ಮಾರ್ಗದಲ್ಲಿ ಈಗಾಗಲೇ ಭಾರಿ ವಾಹನಗಳ ಓಡಾಟಕ್ಕೆ ನಿಷೇಧ ಹೇರಲಾಗಿದೆ.
ಅನಮೋಡ ಘಾಟ್ ಮಾರ್ಗದಲ್ಲಿ ಸದ್ಯ ಒಂದೇ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಈ ಮಾರ್ಗದಲ್ಲಿ ಸಣ್ಣ ವಾಹನಗಳು, ಜೀವನಾವಶ್ಯಕ ವಸ್ತುಗಳನ್ನು ತೆಗೆದುಕೊಂಡು ಹೋಗುವ ಸಣ್ಣ ಟೆಂಪೊಗಳನ್ನು ಈ ಮಾರ್ಗದಲ್ಲಿ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ಈ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಸುರಕ್ಷತಾ ದೃಷ್ಠಿಯಿಂದ ಭಾರಿ ವಾಹನಗಳ ಓಡಾಟಕ್ಕೆ ನಿಷೇಧ ಹೇರಲಾಗಿದೆ. ಈ ಭಾಗದಲ್ಲಿ ಟ್ರಾಫಿಕ್ ಪೋಲಿಸರನ್ನು ನಿಯೋಜಿಸಲಾಗಿದೆ.
ಕಳೆದ ವಾರ ಅನಮೋಡ ಘಾಟ್ ರಸ್ತೆಯಲ್ಲಿ ಭಾರಿ ಭೂಕುಸಿತವುಂಟಾಗಿತ್ತು. ಈ ಘಟನೆಯಲ್ಲಿ ಅರ್ಧ ರಸ್ತೆ ಕುಸಿದಿತ್ತು. ರಸ್ತೆ ಕುಸಿದ ಸ್ಥಳದಲ್ಲಿ ಎಚ್ಚರಿಕೆಯ ಬೋರ್ಡ ಹಾಕಲಾಗಿದೆ. ಭಾರಿ ವಾಹನಗಳನ್ನು ಚೋರ್ಲಾ ಘಾಟ್ ಮಾರ್ಗವಾಗಿ ಓಡಾಟಕ್ಕೆ ಸೂಚನೆ ನೀಡಲಾಗಿದೆ. ರಾಮನಗರ ಭಾಗದಿಂದಲೂ ಅನಮೋಡ ಘಾಟ್ ಮಾರ್ಗದಲ್ಲಿ ಭಾರಿ ವಾಹನಗಳು ಬಾರದಂತೆ ಪೋಲಿಸರನ್ನು ನಿಯೋಜಿಸಲಾಗಿದೆ. ಮೋಲೆಮ್ ಚೆಕ್ ಪೋಸ್ಟನಲ್ಲಿಯೂ ಕೂಡ ಅನಮೋಡ ಭಾಗಕ್ಕೆ ಭಾರಿ ವಾಹನಗಳು ತೆರಳದಂತೆ ಪೋಲಿಸರು ಕಟ್ಟೆಚ್ಚರ ವಹಿಸಿದ್ದಾರೆ.
ಮೋಲೆಮ್ ನಿಂದ ಅನಮೋಡ ವರೆಗೆ ರಸ್ತೆ ಹಲವೆಡೆ ಹೆಚ್ಚಿನ ಪ್ರಮಾಣದಲ್ಲಿ ಹೊಂಡ ಬಿದ್ದಿದ್ದು ವಾಹನಗಳ ಓಡಾಟಕ್ಕೆ ತೊಂದರೆಯುಂಟಾಗುತ್ತಿದೆ. ಲೋಕಫಪಯೋಗಿ ಇಲಾಖೆ ಇಲ್ಲಿ ಚೀರೆ ಕಲ್ಲಿನ ಮಣ್ಣು ಹಾಕಿ ರಸ್ತೆ ಹೊಂಡ ಮುಚ್ಚುತ್ತಿದೆ. ಆದರೆ ನಾಲ್ಕು ವಾಹನಗಳ ಓಡಾಟದ ನಂತರ ಅಲ್ಲಿ ಯಥಾ ಸ್ಥಿತಿಯಲ್ಲಿ ಹೊಡ ಬೀಳುತ್ತಿದೆ. ಇದರಿಂದಾಗಿ ಇಲ್ಲಿ ಡಾಂಬರು ಹಾಕಿ ರಸ್ತೆ ಮುಚ್ಚಬೇಕು ಎಂದು ವಾಹನ ಸವಾರರು ಆಘ್ರಹಿಸಿದ್ದಾರೆ.