ಸುದ್ಧಿಕನ್ನಡ ವಾರ್ತೆ
 ತಂದೆ ಮತ್ತು ಮಗ ಸೇರಿಕೊಂಡು ಸಹೋದ್ಯೋಗಿ ಕಾರ್ಮಿಕನನ್ನು ಕರುಣಾಹೀನವಾಗಿ ವಿಕೃತಿ ಮೆರೆದು ಭೀಕರವಾಗಿ ಕೊಲೆಗೈದ ಘಟನೆ ಗೋವಾದ ಮಾಪ್ಸಾದ ಗಿರಿಯಲ್ಲಿ ನಡೆದಿದೆ. ಓಡಿಶಾ ಮೂಲದ (from Odisha)ಕಾರ್ಮಿಕನ ಮೃತದೇಹವು ರಕ್ತದ ಮಡುವಿನಲ್ಲಿ ನಿರ್ಮಾಣ ಹಂತದ ಕಟ್ಟಡದ ಬಳಿ ಇರುವ ತಗಡಿನ ಶೆಡ್ (Shed) ನಲ್ಲಿ ಪತ್ತೆಯಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಪಂಚನಾಮೆ ನಡೆಸಿ ಓಡಿಶಾ ಮೂಲದ ಸತ್ಯ ನಬರಾಂಗಪುರಾ (50) ಹಾಗೂ ಧಾಬೀರ್ ನಬರಾಂಗಪುರಾ (31) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾರ್ಮಿಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗೋವಾ ವೈದ್ಯಕೀಯ ಮಹಾವಿದ್ಯಾಲಯ  GMC  ಗೆ ಕಳುಹಿಸಲಾಗಿದೆ.

ಘಟನೆಯ ವಿವರ:
ಮಾಪ್ಸಾದ (Mapusa)  ಫೊಡೆಕ್ ವಾಡೊ- ಪರ್ರಾದಲ್ಲಿ ವಿಲ್ಲಾ ಕಟ್ಟಡದ ನಿರ್ಮಾಣ ನಡೆಯುತ್ತಿತ್ತು. ಇವರೆಲ್ಲರೂ ವಿಲ್ಲಾದ ಗೌಂಡಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲಿಯೇ ಪಕ್ಕದಲ್ಲಿ ನಿರ್ಮಿಸಿದ್ದ ತಗಡಿನ ಜೋಪಡಿಯಲ್ಲಿ ಇವರೆಲ್ಲರ ವಾಸ್ತವ್ಯವಿತ್ತು ಆ ಜೋಪಡಿಯಲ್ಲಿಯೇ ಭೀಕರ ಕೊಲೆ ನಡೆದಿದೆ. ಈ ಭೀಕರ ಕೊಲೆಯು ಯಾವ ಕಾರಣಕ್ಕಾಗಿ ನಡೆಸಲಾಗಿದೆ ಎಂಬ ಕುರಿತಂತೆ ಪೋಲಿಸರು ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಮೃತ ಕಾರ್ಮಿಕನ ಸಂಪೂರ್ಣ ವಿವರ ಪೋಲಿಸರಿಗೆ ಇದುವರೆಗೂ ಲಭ್ಯವಾಗಿಲ್ಲ ಎನ್ನಲಾಗಿದೆ.

ಅಮಾನುಷ ಕೃತ್ಯ…
ಕೊಲೆಗಡುಕರು ಈ ಕಾರ್ಮಿಕನ ಕಣ್ಣು ಗುಡ್ಡೆಯನ್ನೇ ಕಿತ್ತುಹಾಕಿ, ಹೊಟ್ಟೆ ಹಾಗೂ ಗುಪ್ತಾಂಗವನ್ನೇ ಕತ್ತರಿಸಿ ವಿಕೃತಿ ಮೆರೆದಿದ್ದಾರೆ. ಇದರಿಂದಾಗಿ ಈ ಕೊಲೆಗಾರರು ನಡೆಸಿದ ಕ್ರೂರತೆಯು ಬೆಳಕಿಗೆ ಬಂದಿದೆ. ಕೊಲೆ ಮಾಡಿ ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದರು. ಸಮೀಪದಲ್ಲಿಯೇ ಇದ್ದ ಗದ್ಧೆಯಲ್ಲಿ ಅಡಗಿ ಕುಳಿತಿದ್ದರು. ಪೋಲಿಸರು ಕಾರ್ಯಾಚರಣೆ ನಡೆಸಿ ಈ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೋಲಿಸ್ ನಿರೀಕ್ಷಕ ನಿಖಿಲ್ ಪಾಲಯೇಕರ್, ಉಪನಿರೀಕ್ಷಕ ಅಜಯ ಧುರಿ, ಯಶವಂತ ಮಾಂದ್ರೇಕರ್, ಬಾಬಲೋ ಪರಬ್, ವಿರಾಜ ಕೊರಗಾಂವಕರ್, ಸಹಾಯಕ ಉಪನಿರೀಕ್ಷಕ ಮಹೇಶ ಶೆಟಗಾಂವಕರ್‍ಮ ಹೆಡ್ ಕಾನ್ ಸ್ಟೇಬಲ್ ಸುಶಾಂತ ನಾಯ್ಕ ಚೋಪಡೇಕರ್, ಸೇರಿದಂತೆ ಇತರ ಪೋಲಿಸರು ಈ ಪ್ರಕರಣದಲ್ಲಿ ಆರೋಪಿಗಳ ಸೆರೆಗೆ ತೀವ್ರ ಕಾರ್ಯಚರಣೆ ನಡೆಸಿದ್ದರು.