ಸುದ್ಧಿಕನ್ನಡ ವಾರ್ತೆ
ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿ ನಂತರ ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದ ಘಟನೆಗೆ ಸಂಭಂಧಿಸಿದಂತೆ ಕರ್ನಾಟಕ (Karnataka) ಮೂಲದ ಯುವಕನನ್ನು ಗೋವಾ ಪೋಲಿಸರು (Goa Police) ಬಂಧಿಸಿದ್ದಾರೆ. ಕಾರಿನಲ್ಲಿದ್ದ ಕರ್ನಾಟಕದ ನಾಲ್ವರು ಘಟನಾ ಸ್ಥಳದಿಂದ ಪರಾರಿಯಾಗುತ್ತಿದ್ದ ಸಂದರ್ಭದಲ್ಲಿ ಗೋವಾದ ಪರ್ಯೆ ಎಂಬಲ್ಲಿ ಸ್ಥಳೀಯರು ಈ ಯುವಕರನ್ನು ಸೆರೆ ಹೊಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ. ಈ ಘಟನೆಯಿಂದಾಗಿ ಪರ್ಯೆ ಸುತ್ತಮುತ್ತಲಿನ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಈ ಘಟನೆಗೆ ಸಂಭಂಧಿಸಿದಂತೆ ಲಭ್ಯವಾದ ಮಾಹಿತಿಯ ಅನುಸಾರ- ಕರ್ನಾಟಕದಿಂದ ಗೋವಾಕ್ಕೆ ಕಾರಿನಲ್ಲಿ ಬಂದಿದ್ದ ಪ್ರವಾಸಿಗರು (Tourists)ಗೋವಾದ ಪರ್ಯೆ ಎಂಬಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಇಷ್ಟೇ ಅಲ್ಲದೆಯೇ ನಂತರ ನಿಯಮವನ್ನು ಉಲ್ಲಂಘಿಸಿ ಕಾರು ಓಡಿಸಿ ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.

ಈ ಘಟನೆಯ ನಂತರ ಕರ್ನಾಟಕದ ಪ್ರವಾಸಿಗರು ಪರ್ಯೆ ಯಲ್ಲಿ ಓಡಿಹೋಗುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರು ಇವರನ್ನು ಬೆನ್ನಟ್ಟಿ ಸೆರೆ ಹೊಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ. ನಂತರ ಸ್ಥಳೀಯರು ಈ ಕುರಿತು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಪೋಲಿಸರು ಜಕರ್ನಾಟಕದ ಈ ಪ್ರವಾಸಿಗರನ್ನು ಬಂಧಿಸಿ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿರುವ ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.