ಸುದ್ಧಿಕನ್ನಡ ವಾರ್ತೆ

 ತೆಂಗಿನ ಕಾಯಿ ಗೋವಾ ರಾಜ್ಯದ ಗುರುತಾಗಿದೆ. ಗೋವಾದಲ್ಲಿ ಇತರ ಬೆಳೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ತೆಂಗಿನ ಕಾಯಿ ( Coconut) ಬೆಳೆಯಲಾಗುತ್ತದೆ. ತೆಂಗಿನ ಕಾಯಿಯು ಗೋವಾ ರಾಜ್ಯದ ಜನರ ಆಹಾರದ ಅವಿಭಾಜ್ಯ ಅಂಗವಾಗಿದೆ. ಹೀಗಿರುವಾಗ ಗೋವಾ ರಾಜ್ಯದಲ್ಲಿ ತೆಂಗತಿನ ಕಾಯಿಯ ಕೊರತೆಯುಂಟಾಗಿದೆ. ತೆಂಗಿನ ಕಾಯಿಯ ದರ ಗಗನಕ್ಕೇರಿದೆ. ಗೋವಾದಲ್ಲಿ ನೆರೆಯ ರಾಜ್ಯ ಕರ್ನಾಟಕದಿಂದ (Karnataka )  ಹೆಚ್ಚಿನ ಪ್ರಮಾಣದಲ್ಲಿ ತೆಂಗಿನ ಕಾಯಿ ಪೂರೈಕೆಯಾಗುತ್ತದೆ.
ಒಂದು ಕಾಲದಲ್ಲಿ ಗೋವಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆಂಗಿನ ಕಾಯಿ ಬೆಳೆಯಲಾಗುತ್ತಿತ್ತು. ಗೋವಾದಲ್ಲಿ ಆಹಾರದಲ್ಲಿ ಪ್ರಮುಖವಾಗಿ ತೆಂಗಿನ ಕಾಯಿ ಬಳಕೆ ಮಾಡಲಾಗುತ್ತದೆ. ಇಷ್ಟೇ ಅಲ್ಲದೆಯೇ ದೇವಸ್ಥಾನ (Temple) ಚರ್ಚಗಳಲ್ಲಿ ಧಾರ್ಮಿಕ ಕಾರ್ಯಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ತೆಂತಗಿನ ಕಾಯಿ ಬಳಕೆಯಾಗುತ್ತದೆ. ಗೋವಾದಲ್ಲಿ ತೆಂಗಿಕಾಯಿ ತುಟ್ಟಾಗ್ರತೆಯುಂಟಾಗಲು ಕಾರಣವೇನು,,,? ಎಂಬುದು ಪ್ರಶ್ನೆಯಾಗಿದೆ.

ಹಲವರು ಜನರ ಹೇಳಿಕೆಯ ಪ್ರಕಾರ ಗೋವಾದಲ್ಲಿ ಇತ್ತೀಚಿನ ದಿನಗಳಲ್ಲಿ ಎಳನೀರು (  Coconut water) ಹೆಚ್ಚಾಗಿ ಮಾರಾಟವಾಗುತ್ತಿದೆ. ಇದರಿಂದಾಗಿ ತೆಂಗು ಬೆಳೆಗಾರರು ಕೂಡ ಎಳನೀರನ್ನು ಹೆಚ್ಚಾಗಿ ಪೂರೈಕೆ ಮಾಡುತ್ತಿದ್ದಾರೆ. ಇದರಿಂದಾಗಿ ತೆಂಗಿನ ಕಾಯಿ ಆವಕ ಕಡಿಮೆಯಾಗಿ ಬೆಲೆ ಗಗನಕ್ಕೇರಿದೆ ಎಂದೇ ಹೇಳಲಾಗುತ್ತದೆ.
ಸದ್ಯ ಗೋವಾದಲ್ಲಿ ತೆಂಗಿನ ಕಾಯಿ ದರ ಗಾತ್ರಕನುಸಾರವಾಗಿ 25,30,40, 50 ರೂಗಳವರೆಗೆ ಮಾರಾಟ ಮಾಡಲಾಗುತ್ತಿದೆ. ಗೋವಾದಲ್ಲಿ ಪಟ್ಟಣ ಬೆಳೆಯುತ್ತಿದೆ. ಜನಸಂಖ್ಯೆಯೂ ಹೆಚ್ಚಾಗುತ್ತಿದೆ. ತೆಂಗಿನಕಾಯಿ ಉತ್ಪಾದನೆ ಕಡಿಮೆ ಬೇಡಿಕೆ ಹೆಚ್ಚು ಎಂಬಂತಾಗಿದೆ. ಕರ್ನಾಟಕದಿಂದ ಪ್ರಮುಖವಾಗಿ ತೆಂಗಿನಕಾಯಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ. ತೆಂಗಿನ ಕಾಯಿ ಆವಕದ ಕೊರತೆಯು ದರ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಗೋವಾದಲ್ಲಿ ದೊಡ್ಡ ಗಾತ್ರದ ತೆಂಗಿನ ಕಾಯಿ 50 ರೂ ಅಂತೆಯೇ ಎಳನೀರಿನ ದರ 60 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ.

ಕೃಷಿ ತಜ್ಞ ಡಾ.ಪರಮೇಶ ವಿ ರವರು ನೀಡಿರುವ ಮಾಹಿತಿಯ ಅನುಸಾರ- ಒಂದು ತೆಂಗಿನ ಮರಕ್ಕೆ 30 ವರ್ಷಕಿಂತ ಹೆಚ್ಚಾದರೆ ಆ ತೆಂಗಿನ ಮರದಲ್ಲಿ ಬೆಳೆ ಕಡಿಮೆಯಾಗುತ್ತದೆ. ಇದರಿಂದಾಗಿ ಒಂದು ತೆಂಗಿನ ಮರ ಫಲ ಕೊಡುತ್ತಿರುವಾಗಲೇ ಅದರ ಪಕ್ಕದಲ್ಲಿ ಮತ್ತೊಂದು ತೆಂಗಿನ ಸಸಿ ನೆಡಬೇಕಾಗುತ್ತದೆ. ಇದರಿಂದಾಗಿ ದೊಡ್ಡ ತೆಂಗಿನ ಮರ ಕಾಯಿ ಬೆಳೆ ಕಡಿಮೆಯಾಗುತ್ತಿದ್ದಂತೆಯೇ ಹೊಸ ಸಸಿಯು ಕಾಯಿ ಬಿಡಲು ಆರಂಭಗೊಳ್ಳುತ್ತದೆ. ಹೀಗೆ ಮಾಡದಿದ್ದರೆ ಕಾಯಿ ಉತ್ಪಾದನೆ ಕಡಿಮೆಯಾಗುತ್ತಾ ಹೋಗುತ್ತದೆ ಎಂದರು.

ಗೋವಾ ರಾಜ್ಯ ಸರ್ಕಾರವು ರಾಜ್ಯದಲ್ಲಿ ತೆಂಗಿನ ಕಾಯಿ ಬೆಳೆಗಾರರಿಗೆ ಪ್ರತಿ ತೆಂಗಿನ ಕಾಯಿಗೆ 6 ರೂ ಬೆಂಬಲ ಬೆಲೆ ( Rs. 6 support price  ) ನೀಡುತ್ತದೆ. ಇಂದು ಗೋವಾದಲ್ಲಿ 10 ಹೆಕ್ಟೇರ್ ಜಮೀನು 1600 ತೆಂಗಿನ ಮರ ಹೊಂದಿದ ರೈತರು 1 ಲಕ್ಷ ತೆಂಗಿನ ಕಾಯಿ ಬೆಳೆಯುತ್ತಿರುವವರು ಕೂಡ ಈ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ. ಗೋವಾದಲ್ಲಿ ಜಮೀನಿಗೆ ಬೆಲೆ ಹೆಚ್ಚಾಗಿದೆ. ಇದರಿಂದಾಗಿ ಜನರು ಗೋವಾದಲ್ಲಿ ತಮ್ಮ ಜಮೀನಿಗಲ್ಲಿ ತೆಂಗಿನ ಸಸಿ ಹೊಸದಾಗಿ ನೆಡುತ್ತಿಲ್ಲ. ಜಮೀನನ್ನು ಪ್ಲೊಟ್ ಗಳನ್ನಾಗಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಗೋವಾದಲ್ಲಿ ತೆಂಗಿನ ಕಾಯಿ ಉತ್ಪಾದನೆ ಕಡಿಮಾಗುತ್ತಲೇ ಸಾಗಿದೆ. ಆದರೆ ಗೋವಾದಲ್ಲಿ ತೆಂಗಿನ ಕಾಯಿ ಬೇಡಿಕೆ ಮಾತ್ರ ಹೆಚ್ಚಾಗುತ್ತಲೇ ಇದೆ. ಇದರಿಂದಾಗಿ ತೆಂಗಿನ ಕಾಯಿ ದರ ಗಗನಕ್ಕೇರಿದೆ.