ಸುದ್ಧಿಕನ್ನಡ ವಾರ್ತೆ
ಗೋವಾದ ತಿಸ್ವಾಡಿ ತಾಲೂಕಿನ ಸಂತ ಇಸ್ತೆವೆಯಲ್ಲಿರುವ ಶಾಲೆಯ ನಾಲ್ವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಶಂಕಿತ ಶಿಕ್ಷಕನ (Teacher) ವಿರುದ್ಧ ಓಲ್ಡಗೋವಾ ಪೆÇಲೀಸರು(Police) ಪ್ರಕರಣ ದಾಖಲಿಸಿದ್ದಾರೆ.
ಈ ಘಟನೆ ಗುರುವಾರ 3ನೇ ತಾರೀಖಿನಂದು ಮಧ್ಯಾಹ್ನ 2.46 ರ ಸುಮಾರಿಗೆ ನಡೆದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಗಳು(Students) 13 ಮತ್ತು 14 ವರ್ಷದವರಾಗಿದ್ದಾರೆ. ಈ ಸಂಬಂಧ ಮಾಶೆಲ್-ಫೆÇೀಂಡಾದ ವಿದ್ಯಾರ್ಥಿಯ ತಾಯಿ ಇತರ ಪೆÇೀಷಕರ ಪರವಾಗಿ ಓಲ್ಡಗೋವಾ ಪೆÇಲೀಸರಿಗೆ ದೂರು ನೀಡಿದ್ದಾರೆ.
ಶಂಕಿತ ಶಿಕ್ಷಕ ನಾಲ್ವರು ಮಕ್ಕಳ ಮೇಲೂ ದೌರ್ಜನ್ಯ ಎಸಗಿ ಕೋಲಿನಿಂದ ಹೊಡೆದಿದ್ದಾರೆ. ಮಕ್ಕಳು ಶಾಲೆ ಮುಗಿಸಿ ಮನೆಗೆ ಹೋದಾಗ, ದೂರುದಾರ ಪೆÇೀಷಕರಿಗೆ ಈ ಘಟನೆಯ ಬಗ್ಗೆ ಗಮನಕ್ಕೆ ತಂದಿದ್ದಾರೆ. ನಂತರ, ಅವರು ಪೆÇಲೀಸರಿಗೆ (police) ಧಾವಿಸಿ ಅಧೀಕೃತವಾಗಿ ದೂರು ದಾಖಲಿಸಿದ್ದಾರೆ.
ಪೆÇೀಷಕರು ನೀಡಿದ ದೂರಿನ ಆಧಾರದ ಮೇಲೆ, ಪೆÇಲೀಸರು ಐಪಿಸಿ ಸೆಕ್ಷನ್ 118(1) ಮತ್ತು 352 ಮತ್ತು ಗೋವಾ ಬಾಲಾಪರಾಧಿ ಕಾಯ್ದೆಯ ಸೆಕ್ಷನ್ 8(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೆÇಲೀಸರು ಶಂಕಿತ ಶಿಕ್ಷಕನನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಈ ಘಟನೆ ವಿದ್ಯಾರ್ಥಿಗಳು ಮತ್ತು ಪೆÇೀಷಕರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ಈ ಪ್ರಕರಣದಲ್ಲಿ ಮುಂದಿನ ಪೆÇಲೀಸ್ ತನಿಖೆಯಿಂದ ಸತ್ಯ ಹೊರಬರುವ ನಿರೀಕ್ಷೆಯಿದೆ.