ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಹತ್ತು ಹಲವು ವಿಶೇಷತೆಗಳಿಂದ ದೇಶ ವಿದೇಶಿಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿತರಾಗುತ್ತಾರೆ. ಗೋವಾದ ಬಹು ಮುಖ್ಯ ಆಕರ್ಷಣೆಯೇ ಸಮುದ್ರ ತೀರಗಳು. ಗೋವಾದ ಸಮುದ್ರದಲ್ಲಿ ಡಾಲ್ಫಿನ್ ಫಿಶ್ ಗಳ (Dolphin fish)  ವೀಕ್ಷಣೆಗೆ ಬೋಟ್ ಪ್ರವಾಸ ನಿಮ್ಮನ್ನು ಹೊಸ ಲೋಕಕ್ಕೆ ಕರೆದೊಯ್ಯುತ್ತದೆ. ಗೋವಾಕ್ಕೆ ಪ್ರವಾಸ ಮಾಡುವ ಪ್ಲ್ಯಾನ್ ಮಾಡಿದ್ದರೆ ಸಮುದ್ರದಲ್ಲಿ ಡಾಲ್ಫಿನ್ ನೋಡಲು ಹೋಗುವುದನ್ನು ಮಾತ್ರ ಮಿಸ್ ಮಾಡಬೇಡಿ….

ಗೋವಾ ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರು ಮುಂಚೆಯೇ ಒಂದು ಪ್ಲ್ಯಾನ್ ಮಾಡಿಕೊಂಡು ಬರುತ್ತಾರೆ. ಇದರಲ್ಲಿ ಡಾಲ್ಫಿನ್ ಫಿಶ್ ಬೋಟಿಂಗ್(Dolphin Fish Boating)  ಸೇರಿಸಿಕೊಳ್ಳುವುದನ್ನು ಮರೆಯಲೇ ಬೇಡಿ.

ಉತ್ತರ ಗೋವಾಕ್ಕೆ ಆಗಮಿಸಿದರೆ ಕಲಂಗುಟ್ ಅಥವಾ ಕೊಕೊ ಬೀಚ್, ಮೀರಾಮಾರ್ ಬೀಚ್ ಗಳಿಂದ ಡಾಲ್ಫಿನ್ ವೀಕ್ಷಣೆಗೆ ಬೋಟ್ ಗಳು ಲಭ್ಯವಿರುತ್ತದೆ. ಸುಮಾರು 45 ನಿಮಿಷಗಳಿಂದ ಒಂದು ಗಂಟೆಯ ವರೆಗೆ ಬೋಟ್ ನಲ್ಲಿ ಡಾಲ್ಫಿನ್ ವೀಷಣೆಗೆ ಅವಿಸ್ಮರಣೀಯ ಪ್ರಯಾಣ ನಿಮ್ಮದಾಗಲಿದೆ. ಡಾಲ್ಫಿನ್ ಬೋಟ್ ಪ್ರವಾಸದಲ್ಲಿ ಪೋರ್ಟ ಅಗುಂದಾ, ಮಿಲೇನಿಯರ್ಸ ಅರಮನೆ, ನೋಡಬಹುದಾಗಿದೆ. ಸಮುದ್ರದಲ್ಲಿ ತೆರಳುವಾಗ ಬೋಟ್ ಹಿಂಬದಿಯಲ್ಲಿ ಡಾಲ್ಫಿನ್ ಗಳು ಜಿಗಿಯುವುದನ್ನೂ ಕಾಣಬಹುದಾಗಿದೆ.

ಡಾಲ್ಫಿನ್ ಬೋಟ್ ಸೌಲಭ್ಯವು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6.30 ರವರೆಗೆ ಮಾತ್ರ ಲಭ್ಯವಿರತ್ತದೆ. ಬೋಟ್ ಮೂಲಕ ಡಾಲ್ಫಿನ್ (Dolphin) ವೀಕ್ಷಣೆಗೆ ಸಮುದ್ರದಲ್ಲಿ ದೂರದ ವರೆಗೆ ಕರೆದೊಯ್ಯಲಾಗುತ್ತದೆ. ಡಾಲ್ಫಿನ್ ಪ್ರವಾಸದ ಸಂದರ್ಭದಲ್ಲಿ ನಿಮ್ಮ ಗುರುತಿನ ಚೀಟಿ, ಕ್ಯಾಮರಾ, ಸನ್ ಸ್ಕ್ರೀನ್ ಗಳನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ.