ಸುದ್ಧಿಕನ್ನಡ ವಾರ್ತೆ
ವೀಸಾ (Visa) ಅವಧಿ ಮುಕ್ತಾಯಗೊಂಡ ನಂತರವೂ ಗೋವಾದಲ್ಲಿ ಅಕ್ರಮವಾಗಿ ವಾಸ್ತವ್ಯ ಹೂಡಿರುವ ವಿದೇಶಿ ನಾಗರೀಕರ ವಿರುದ್ಧ ಗೋವಾ ಪೋಲಿಸರು ಕಠಿಣ ಕ್ರಮ ಜರುಗಿಸುವ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಪ್ರಸಕ್ತ ವರ್ಷ ಇದುವರೆಗೂ ಗೋವಾದಲ್ಲಿ ಅಕ್ರಮ ವಾಸ್ತವ್ಯ (illegal stay) ಹೂಡಿದ್ದ 79 ವಿದೇಶಿ ನಾಗರೀಕರ ವಿರುದ್ಧ ಪ್ರಕರಣ ದಾಖಲಾಗಿದೆ. (Cases against foreign nationals) ಇವರಲ್ಲಿ 32 ಜನ ಪುರುಷರು ಹಾಗೂ 47 ಜನ ಮಹಿಳೆಯರು ಒಳಗೊಂಡಿದ್ದಾರೆ. ಪ್ರಕರಣ ದಾಖಲಾದ ವಿದೇಶಿಗರಲ್ಲಿ 49 ಜನ ರಷ್ಯನ್ ಹಾಗೂ ಬಾಂಗ್ಲಾದೇಶದ ಪ್ರಜೆಗಳಾಗಿದ್ದಾರೆ ಎಂದು FRRO ಪೋಲಿಸ್ ಅಧೀಕ್ಷಕ ಅರ್ಶಿ ಆದಿಲ್ ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ಪೋಲಿಸ್ ಅಧೀಕ್ಷಕರು ಹೆಚ್ಚಿನ ಮಾಹಿತಿ ನೀಡುತ್ತ- ಪ್ರಕರಣ ದಾಖಲಾದ ವಿದೇಶಿ ನಾಗರೀಕರಲ್ಲಿ 32 ಪುರುಷರಲ್ಲಿ 13 ಜನ ರಷ್ಯನ್, 12 ಜನ ಬಾಂಗ್ಲಾದೇಶಿ, ಯುಗಾಂಡಾ, ನೈಜೇರಿಯಾ, ಪೋಲಂಡ, ಮೊರೊಕ್ಕೊ, ಬ್ರಿಟೀಷ, ಯುಕ್ರೇನ್, ಬೆಲಾರುಸ್, ಅರ್ಜೆಂಟಿನಾ ದೇಶದ ತಲಾ ಒಬ್ಬೊಬ್ಬ ಪ್ರಜೆಗಳು ಒಳಗೊಂಡಿದ್ದಾರೆ.
ಪ್ರಸಕ್ತ ವರ್ಷ ನಡೆಸಿರುವ ಕಾರ್ಯಾಚರಣೆಯಲ್ಲಿ ಗೋವಾದಲ್ಲಿ ಅಕ್ರಮವಾಗಿ ನೆಲೆಸಿದ್ದ ವಿದೇಶಿ ಪ್ರಜೆಗಳನ್ನು ಏಪ್ರಿಲ್ ನಲ್ಲಿ 14 ಜನ ವಿದೇಶಿ ನಾಗರೀಕರ ವಿರುದ್ಧ ಕ್ರಮ ಜರುಗಿಸಲಾಗಿದೆ. ಮೇ ತಿಂಗಳಲ್ಲಿ 10 ಜನ ವಿದೇಶಿಗರನ್ನು, ಜೂನ್ ನಲ್ಲಿ 20 ಜನ ವಿದೇಶಿ ನಾಗರೀಕರ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂಬ ಮಾಹಿತಿ ನೀಡಿದರು.
ಹಲವು ಜನ ವಿದೇಶಿ ನಾಗರೀಕರು ತಮ್ಮ ವೀಸಾ(visa) ಕಾಲಾವಧಿ ಮುಕ್ತಾಯಗೊಂಡಿದ್ದರೂ ಕೂಡ ಗೋವಾದಲ್ಲಿ ಅಕ್ರಮವಾಗಿ ವಾಸ್ತವ್ಯ ಹೂಡಿದ್ದರು. ಇವರಲ್ಲಿ ಕೆಲವರು ಗೋವಾದಲ್ಲಿ ಅಕ್ರಮವಾಗಿ ಡ್ರಗ್ಸ ಮತ್ತಿತ್ತರ ಮಾದಕ ವಸ್ತುಗಳ ವ್ಯವಹಾರದಲ್ಲಿ ತೊಡಗಿದ್ದರು ಎನ್ನಲಾಗಿದೆ. ಇದರಿಂದಾಗಿ ಗೋವಾ ಪೋಲಿಸರು ಬಹು ಮುಖ್ಯವಾಗಿ ಕಿನಾರಿ ಭಾಗದಲ್ಲಿ ವಾಸ್ತವ್ಯ ಹೂಡಿರುವ ವಿದೇಶಿ ನಾಗರೀಕರನ್ನು ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಅಕ್ರಮ ವಾಸ್ತವ್ಯ ಹೂಡಿರುವ ವಿದೇಶಿ ಪ್ರಜೆಗಳ ವಿರುದ್ಧ ಪ್ರಕರಣ ದಾಖಲಾಗಿದ್ದು ಅವರ ಪ್ರಕರಣದ ವಿಚಾರಣೆ ಮುಗಿಯುವ ವರೆಗೂ ಅವರ ದೇಶಕ್ಕೆ ಮರಳಲು ಅವಕಾಶ ನೀಡಲಾಗುವುದಿಲ್ಲ ಎಂದು ಪೋಲಿಸ್ ಅಧಿಕಾರಿಗಳು ಮಾಹಿತಿ ನೀಡಿದರು.
ಗೋವಾದಲ್ಲಿ ಎಲ್ಲಿಯೇ ಆದರೂ ಕೂಡ ವಿದೇಶಿ ನಾಗರಿಕರು ವೀಸಾ ಕಾಲಾವಧಿ ಮುಗಿದ ನಂತರವೂ ಅಕ್ರಮ ವಾದ್ತವ್ಯ (Illegal stay) ಹೂಡಿರುವುದು ಕಂಡುಬಂದರೆ ಕೂಡಲೆ ಪೋಲಿಸ್ ಠಾಣೆಗೆ ಮಾಹಿತಿ ನೀಡಬೇಕು. ವಿದೇಶಿ ನಾಗರೀಕರಿಗೆ ಬಾಡಿಗೆ ದಾರರು ತಮ್ಮ ನೆಯಲ್ಲಿ ಬಾಡಿಗೆ ನೀಡಬೇಕಾದರೆ ಪೋಲಿಸ್ ಠಾಣೆಯಲ್ಲಿ ಸಿ ಫಾರ್ಮ ಭಡ್ಡಾಯವಾಗಿ ಭರ್ತಿ ಮಾಡಬೇಕು ಒಂದು ವೇಳೆ ವಿದೇಶಿ ನಾಗರೀಕರಿಗೆ ಸಿಫಾರ್ಮ ಭರ್ತಿ ಮಾಡದೆಯೇ ಬಾಡಿಗೆ ನೀಡಿರುವುದು ಕಂಡುಬಂದರೆ ಮನೆ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಪೋಲಿಸ್ ಅಧಿಕಾರಿಗಳು ಮಾಹಿತಿ ನೀಡಿದರು.