ಸುದ್ಧಿಕನ್ನಡ ವಾರ್ತೆ
ಪಣಜಿ: ಪಣಜಿ ಸಮೀಪದ ಚೋಡಣ ದ್ವಿಪಕ್ಕೆ ( Chodan Island)ತೆರಳುವ ಫೇರಿ ಬೋಟ್ ಮೂಳುಗಿ ಮೂರು ತಿನ ಕಳೆದಿದೆ. ಇದುವರೆಗೂ ಈ ಫೇರಿ ಬೋಟ್ (Fairy boat) ಮುಳುಗಡೆಯಾಗಲು ಕಾರಣವೇನು ಎಂಬುದು ತನಿಖೆಯಾಗಿಲ್ಲ. ಇದರಿಂದಾಗಿ ಗೋವಾದಲ್ಲಿ ಇಂತಹ ಬೋಟ್ ಗಳ ಸಂಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಗಂಭೀರವಾಗಿಯೇ…? ಎಂಬ ಪ್ರಶ್ನೆ ಎದುರಾಗಿದೆ.
ಫೇರಿ ಬೋಟ್ ಮುಳುಗಲು ಕಾರಣವೇನು..? ಯಾರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ…? ಇದಕ್ಕೆ ಜಹವಾಬ್ದಾರಿ ಯಾರು..? ಎಂಬುದು ತನಿಖೆಯಿಂದಲೇ ಬೆಳಕಿಗೆ ಬರಬೇಕೊದೆ. ಒಂದು ಫೇರಿ ಬೋಟ್ ಮುಳುಗಿ ಎರಡು ದಿನದಲ್ಲೇ ಮತ್ತೊಂದು ಫೇರಿ ಬೋಟ್ ನದಿ ಮಧ್ಯದಲ್ಲಿ ಎಂಜಿನ್ ಬಂದ್ ಆಗಿ ನಿಯಂತ್ರಣ ಕಳೆದುಕೊಂಡಿತು. ಇಂತಹ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ ಬಾರ್ಜ ಚಾಲಕ ಗಮನಿಸಿ ಬಾರ್ಜನ್ನು ದಡದ ಬದಿಗೆ ತೆಗೆದುಕೊಂಡು ಹೋಗಿ ನಿಲ್ಲಿಸಿದ್ದರಿಂದ ಫೇರಿಬೋಟ್ ನಲ್ಲಿ ಇದ್ದ ಪ್ರಯಾಣಿಕರು ಬಚಾವ್ ಆಗಿದ್ದಾರೆ. ಇಂತಹ ಘಟನೆ ಮತ್ತೆ ಮರುಕಳಿಸಿರುವುದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಬಾರ್ಜ ಚಾಲಕ ಎಚ್ಚೆತ್ತುಕೊಂಡಿದ್ದರಿಂದ ದುರ್ಘಟನೆ ತಪ್ಪಿದಂತಾಗಿದೆ. ಇಲ್ಲವಾದಲ್ಲಿ ಫೇರಿಬೋಟ್ ಬಾರ್ಜಗೆ ಡಿಕ್ಕಿ ದೊಡೆಯುತ್ತಿತ್ತು. ಈ ಘಟನೆ ಬುಧವಾರ ಸಂಭವಿಸಿದೆ.
ಗೋವಾ ರಾಜ್ಯದಲ್ಲಿ ಸದ್ಯ 19 ಸ್ಥಳಗಳಲ್ಲಿ ಜಲ ಮಾರ್ಗಗಳಿಗೆ ಫೇರಿ ಬೋಟ್ ಓಡಾಟ ನಡೆಸುತ್ತದೆ. ಇದರ ಸುರಕ್ಷತಾ ತಪಾಸಣೆ ನಡೆದಿಲ್ಲ ಎಂಬುದು ಇಂತಹ ಖಟನೆಯಿಂದ ಪ್ರಶ್ನೆ ಮೂಡುವಂತಾಗಿದೆ.(At present, ferry boats ply to waterways at 19 locations in the state of Goa).
ಗೋವಾ ರಾಜ್ಯದ ಹಲವು ದ್ವೀಪಗಳಲ್ಲಿ ವಾಸಿಸುವವರು ಮತ್ತು ಒಂದು ದಡದಿಂದ ಮತ್ತೊಂದು ದಡಕ್ಕೆ ಸೇತುವೆ ಸಂಪರ್ಕ ಇಲ್ಲದ ಊರಿನ ಜನರು ಫೇರಿ ಬೋಟ್ ನ್ನೇ ಅವಲಂಭಿಸಿದ್ದಾರೆ. ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಫೇರಿ ಬೋಟ್ ಮೇಲೆ ಜನರು ಓಡಾಟ ನಡೆಸುತ್ತಾರೆ. ಆದರೆ ಇದೀಗ ನಡೆದಿರುವ ಎರಡು ಘಟನೆಗಳು ಜನರಲ್ಲಿ ಭಯ ಮೂಡಿಸಿದೆ. ಸರ್ಕಾರ ಕೂಡಲೇ ಎಚ್ಚೆತ್ತು ಫೇರಿಬೋಟ್ ಗಳ ಸೂಕ್ತ ತಪಾಸಣೆ ನಡೆಸಬೇಕಿದೆ.