ಸುದ್ಧಿಕನ್ನಡ ವಾರ್ತೆ
ಪಣಜಿ: ಮಳೆಗಾಲ ಆರಂಭಗೊಂಡಾಗಿನಿಂದ ಗೋವಾ-ಬೆಳಗಾವಿ (Goa-Belagavi) ಸಂಪರ್ಕಿಸುವ ಚೋರ್ಲಾ ಮತ್ತು ಅನಮೋಡ ಘಾಟ್ ರಸ್ತೆಯಲ್ಲಿ ಓಡಾಟ ನಡೆಸುವುದೆಂದರೆ ವಾಹನ ಸವಾರರು ಮತ್ತು ಪ್ರಯಾಣಿಕರು ಜೀವ ಕೈಯ್ಯಲ್ಲಿ ಹಿಡಿದು ಪ್ರಯಾಣಿಸುವಂತಾಗಿದೆ. ಇದೀಗ ಈ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮಂಗಳವಾರ ತಡೆಗೋಡೆತಯೇ ಕುಸಿದುಬಿದ್ದಿದೆ.

ಕಳೆದ ಕೆಲ ದಿನಗಳ ಹಿಂದಷ್ಟೇ ಸುಮಾರು 10 ಲಕ್ಷ ರೂ ವೆಚ್ಛದಲ್ಲಿ  ಅನಮೋಡ ಹೆಮ್ಮಡ್ಗ ರಸ್ತೆಗೆ  ನಿರ್ಮಿಸಲಾಗಿದ್ದ ರಸ್ತೆ ಬದಿಯ ತಡೆಗೋಡೆ ಕುಸಿದಿರುವುದು(collapsed)  ಈ ಮಾರ್ಗದಲ್ಲಿ ಓಡಾಟ ನಡೆಸಲು ಕೂಡ ಜನತೆ ಆತಂಕ ಪಡುವಂತಾಗಿದೆ.

ಕಳೆದ ಕೆಲ ದಿನಗಳ ಹಿಂದಷ್ಟೇ ಅನಮೋಡ ಘಾಟ್ ರಸ್ತೆಯಲ್ಲಿ ತಾತ್ಪೂರ್ತಿಕವಾಗಿ ನಿರ್ಮಿಸಿದ್ದ ಸೇತುವೆಯೇ ಕೊಚ್ಚಿ ಹೋಗಿ ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಇದೀಗ ರಸ್ತೆ ಬದಿಯ ತಡೆಗೋಡೆ ಕುಸಿದಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಜನತೆ ಪ್ರಶ್ನಿಸುವಂತಾಗಿದೆ.

ಬೆಳಗಾವಿಯಲ್ಲಿ ಭಾರಿ ಮಳೆ…
ಬೆಳಗಾವಿ ನಗರ ಸೇರಿದಂತೆ ಖಾನಾಪುರ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಈ ಭಾಗದ ಶಾಲಾ ಕಾಲೇಜುಗಳಿಗೆ ಜೂನ್ 25 ರಂದು ರಜೆ ಘೋಷಿಸಲಾಗಿದೆ. ಬೆಳಗಾವಿ ಮತ್ತು ಖಾನಾಪುರ ತಾಲೂಕಿನ ಅಂಗನವಾಡಿ ಕೇಂದ್ರಗಳು, ಸರ್ಕಾರಿ,ಅನುದಾನಿತ, ಹಾಗೂ ಅನುದಾನ ರಹಿತ ಪ್ರಾಥಮಿಕ ಶಾಲೆ , ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ.