ಸುದ್ಧಿಕನ್ನಡ ವಾರ್ತೆ
ಕರಾವಳಿಯ ಗಂಡುಕಲೆಯಾದ ಆರಾಧಿಸುವ ಯಕ್ಷಗಾನ ಕಲೆಯನ್ನು ಗೋವಾದಲ್ಲಿ ಪ್ರಪ್ರಥಮ ಬಾರಿಗೆ ಶ್ರೀ ಸಂಪೂರ್ಣ ದೇವಿ ಮಹಾತ್ಮೆ ಆಖ್ಯಾನದೊಂದಿಗೆ ಗೋವಾದಲ್ಲಿಯೇ ಮೊದಲ ಬಾರಿಗೆ ಸಂಪ್ರದಾಯದಂತೆ ಭವ್ಯ ರಂಗ ಮಂಟಪದಲ್ಲಿ ದೇವಿಯ ಉಯ್ಯಾಲೆಯೊಂದಿಗೆ ಯಶಸ್ವಿಯಾಗಿ ದೇವಿ ಮಹಾತ್ಮೆ ಸಂಪನ್ನಗೊಂಡಿದೆ.
ಶ್ರೀ ದೇವಿ ಮಹಾತ್ಮೆಯ ಪೌರಾಣಿಕ ಪಾತ್ರಗಳಿಗೆ ಜೀವತುಂಬಿದ ಪ್ರತಿಭಾನ್ವಿತ ಹಾಗೂ ಪ್ರಖ್ಯಾತಿಯ ಕಲಾವಿದರು ಯಶಸ್ವಿಯಾಗಲು ಸಾಕ್ಷಿಯಾಗಿದ್ದಾರೆ. ಯಕ್ಷಗಾನ ಉಬಯತಿಟ್ಟುಗಳಲ್ಲಿ ಶ್ರೀ ದೇವಿ ಮಹಾತ್ಮೆಯಂತಹ ಪ್ರಸಂಗಗಳನ್ನು ಹೆಚ್ಚಾಗಿ ತೆಂಕುತಿಟ್ಟಿನಲ್ಲಿ ಅತ್ಯಂತ ಆಕರ್ಷಣೀಯ ಹಾಗೂ ಮನರಂಜನೀಯ ಹಾಗೂ ವಿಜ್ರಂಭಣೆಯಿಂದ ಹಾಗೂ ಭಕ್ತಿ ಪ್ರಧಾನವಾಗಿ ಪ್ರದರ್ಶನವನ್ನು ನೀಡಿದ್ದಾರೆ. ಸೇರಿದ ಯಕ್ಷಗಾನ ಅಭಿಮಾನಿಗಳು ಶ್ರೀ ದೇವಿ ಮಹಾತ್ಮೆ ಪ್ರಸಂಗವನ್ನು ಕಣ್ತುಂಬಿಸಿಕೊಂಡು ಪೂಜಿಸಿ ಆರಾಧಿಸಿ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ.
ಇಂತಹ ಭಕ್ತಿಯ ಕಲೆಯ ಆರಾಧನೆಗೆ ಅವಕಾಶವನ್ನು ಕಲ್ಪಿಸಿರುವ ಪಟ್ಲ ಫೌಂಡೇಶನ್ ಗೋವಾ ಅಧ್ಯಕ್ಷ ಗಣೇಶ ಶೆಟ್ಟಿ ಇರ್ವತ್ತೂರು ಹಾಗೂ ವಿಶೇಷವಾಗಿ ಪಟ್ಲ ಖ್ಯಾತಿಯ ಸತೀಶ ಶೆಟ್ಟಿ ಪಟ್ಲ ರವರು ಗೋವಾದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಲು ಪ್ರಮುಖ ಪಾತ್ರ ವಹಿಸಿದ್ದಾರೆ. ಭಕ್ತಿಪ್ರಧಾನವಾಗಿರುವ ಶ್ರೀ ದೇವಿ ಮಹಾತ್ಮೆ ಪ್ರಸಂಗವನ್ನು ಗೋವಾದಲ್ಲಿರುವ ಎಲ್ಲ ಭಾಗದ ಕಲೆಯ ಆರಾಧಕರು, ಕಲೆಯ ಪೋಷಕರು ಬಂದು ಕಾರ್ಯಕ್ರಮದ ಯಶಸ್ವಿಗೆ ಕಾರಣರಾಗಿದ್ದಾರೆ.
ಜೂನ್ 22 ರಂದು ಭಾನುವಾರ ಸಂಜೆ ಪಣಜಿಯ ಮೆನೆಜಸ್ ಬ್ರಗಾಂಜ ಸಭಾಗೃಹದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಗೋವಾ ಘಟಕದ ದ್ವಿತೀಯ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಜರುಗಿತು. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ರವರ ಸಾರಥ್ಯದಲ್ಲಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯೊಂದಿಗೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವ್ವಜ ಕ್ಷೇತ್ರ ಪಾವಂಜೆ ರವರಿಂದ ಶ್ರೀ ದೇವಿ ಮಹಾತ್ಮೆ ಸಂಪೂರ್ಣ ಯಕ್ಷಗಾನ ಪ್ರದರ್ಶನ ಯಶಸ್ವಿಯಾಯಿತು.