ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಚೋಡಣ ದ್ವೀಪದ (Chodana Island) ಸಂಪರ್ಕ ಸೇತುವೆಯಾಗಿದ್ದ ಫೇರಿ ಬೋಟ್ ಮುಳುಗಡೆರಯಾದ ಘಟನೆ ನಡೆದಿದೆ.

ಗೋವಾದ ಚೋಡಣ ದ್ವೀಪದ ಬಳಿಯಿದ್ದ ಫೇರಿ ಬೋಟ್ ಸೋಮವಾರ ಮಾಂಡವಿ ನದಿಯಲ್ಲಿ ಮುಳುಗಿದ ಘಟನೆ ಸಂಭವಿಸಿದೆ. ಈ ಫೇರಿ ಬೋಟ್ ನಲ್ಲಿ (Fairy boat)  ಅದೃಷ್ಠವಶಾತ್ ಪ್ರಯಾಣಿಕರಿಲ್ಲದ ಕಾರಣ ಯವುದೇ ಪ್ರಾಣಹಾನಿ ಸಂಭವಿಸಿಲ್ಲ.

 

ಗೋವಾದ ಚೋಡಣ ದ್ವೀಪದ ಜನರು ಪ್ರಮುಖವಾಗಿ ಪ್ರತಿದಿನ ಓಡಾಟಕ್ಕೆ ಫೇರಿ ಬೋಟ್ ಗಳನ್ನೇ ಅವಲಂಭಿಸಿದ್ದಾರೆ. ಇದರಿಂದಾಗಿ ಈ ಭಾಗದ ಫೇರಿ ಬೋಟ್ ಗಳು ಭಾರಿ ಗರ್ದಿಯಿಂದ ಕೂಡಿರುತ್ತದೆ. ಆದೃಷ್ಠವಶಾತ್ ಈ ಫೇರಿಬೋಟ್ ನಲ್ಲಿ ಯಾರೂ ಜನರಿರಲಿಲ್ಲ.

ಈ ಕುರಿತು ಸಚಿವ ಸುಭಾಷ ಫಳದೇಸಾಯಿ ಪ್ರತಿಕ್ರಿಯೆ ನೀಡಿ- ಫೆರಿ ಬೋಟ್ ನ ಟ್ಯಾಂಕ್ ಗೆ ರಂದ್ರವಾಗಿರುವ ಸಾಧ್ಯತೆಯಿದೆ. ಜನರ ಸುರಕ್ಷತೆಯನ್ನು ನಾವು ಹಗುರವಾಗಿ ಪರಿಗಣಿಸುವುದಿಲ್ಲ. ಈ ಘಟನೆಯಿಂದಾಗಿ ಎಲ್ಲ ಫೇರಿ ಬೋಟ್ ಗಳ ಫಿಟ್ ನೆಸ್ ಆಡಿಟ್ ಮಾಡಲಾಗುತ್ತದೆ. ಅನರ್ಹ ಬೋಟ್ ಗಳನ್ನು ಬದಲಾಯಿಸಲಾಗುತ್ತದೆ. ಗೋವಾದಲ್ಲಿ ರೋರೊ ಬೋಟ್ ಆರಂಭಗೊಂಡ ನಂತರ ಈ ಬೋಟ್ ಗಳನ್ನು ಬದಲಾಯಿಸಬಹುದು ಎಂಬ ಮಾಹಿತಿ ನೀಡಿದ್ದಾರೆ.