ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯದಲ್ಲಿ ಮತ್ತೆ ಮಾನ್ಸೂನ್ ಸಕ್ರೀಯಗೊಂಡಿದೆ. ಮುಂದಿನ ಒಂದು ವಾರದ ವರೆಗೆ ಗೋವಾದಲ್ಲಿ ಮಧ್ಯಮ ರೀತಿಯಲ್ಲಿ ಮಳೆಗಾಯಲಿದೆ. ಜೂನ್ 22 ರಿಂದ 28 ರವರೆಗೆ ಮಧ್ಯಮ ರೀತಿಯಲ್ಲಿ ಮಳೆಯಾಗಲಿರುವ  (Rain) ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಲ್ಲೊ ಅಲರ್ಟ ಜಾರಿಗೊಳಿಸಲಾಗಿದೆ.

ಗೋವಾ (Goa) ರಾಜ್ಯದಲ್ಲಿ ಜೂನ್ 1 ರಿಂದ ಮಳೆಗಾಲ ಆರಂಭಗೊಂಡಾಗಿನಿಂದ ಇಲ್ಲಿಯ ವರೆಗೆ ಒಟ್ಟೂ 22.21 ಇಂಚು 563.98 ಮಿ.ಮಿ ಮಳೆಯಾಗಿದೆ. ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಅನುಸಾರ ಮುಂದಿನ ಕೆಲ ದಿನ ಗೋವಾ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ. ವಿಶೇಷವಾಗಿ ಕಿನಾರಿ ಭಾಗದಲ್ಲಿ ಅಧಿಕ ಮಳೆಯಾಗುವ ಸಾಧ್ಯತೆಯಿದೆ. ಕಿನಾರಿ ಭಾಗದಲ್ಲಿರುವ ನಾಗರೀಕರು ಎಚ್ಚರದಿಂದಿರುವಂತೆ ಸೂಚನೆ ನೀಡಲಾಗಿದೆ.

 

ಕಳೆದ ಸುಮಾರು ಒಂದು ವಾರದಿಂದ ಗೋವಾ ರಾಜ್ಯಾದ್ಯಂತ ಬಿಸಿಲಿನ ವಾತಾವರಣ ಕಂಡುಬಂದಿತ್ತು. ಇದೀಗ ಮತ್ತೆ ಮಳೆ ಆರಂಭಗೊಂಡಿರುವುದು ಜನತೆಯಲ್ಲಿ ಸಂತಸ ತಂದಿದೆ.