ಸುದ್ಧಿಕನ್ನಡ ವಾರ್ತೆ
ಪ್ರವಾಸಿಗರ ಸ್ವರ್ಗ ಗೋವಾಕ್ಕೆ ಮಳೆಗಾಲದ ಪ್ರವಾಸೋದ್ಯಮವನ್ನು (Rainy season tourism) ಹೆಚ್ಚಿನ ಪ್ರವಾಸಿಗರು ಆಯ್ಕೆ ಮಾಡುತ್ತಾರೆ. ಮಳೆಗಾಲದ ಸಂದರ್ಭದಲ್ಲಿ ಗೋವಾ ಪ್ರವಾಸಕ್ಕೆ ಆಗಮಿಸಲು ಹಲವು ಕಾರಣಗಳಿವೆ.
ಪ್ರತಿ ವರ್ಷ ಅಕ್ಟೋಬರ್ ನಿಂದ ಏಪ್ರಿಲ್ (October to April) ತಿಂಗಳ ವರೆಗೆ ಗೋವಾ ರಾಜ್ಯ ಪ್ರವಾಸೋದ್ಯಮದ ಪ್ರವಾಸಿ ಸೀಜನ್ ಆಗಿರುತ್ತದೆ. ಈ ಸಂದರ್ಭದಲ್ಲಿ ದೇಶ-ವಿದೇಶಿಗರಿಂದ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿ ಸೀಜನ್ ಸಂದರ್ಭದಲ್ಲಿ ಗೋವಾದ ಎಲ್ಲ ಹೋಟೆಲ್ ಗಳ ದರ ಹೆಚ್ಚಳವಾಗಿರುತ್ತದೆ. ಹೆಚ್ಚಿನ ಹೋಟೆಲ್ ಗಳು ಸದಾ ಭರ್ತಿಯಾಗಿರುತ್ತದೆ. ಸೀಜನ್ ಗೆ ಹೋಲಿಸಿದರೆ ಮಳೆಗಾಲದ ಸಂದರ್ಭದಲ್ಲಿ ಹೋಟೆಲ್ ದರ ದುಪ್ಪಟ್ಟಾಗಿರುತ್ತದೆ.
ಗೋವಾದಲ್ಲಿ ಮಳೆಗಾಲದ ಸಂದರ್ಭದಲ್ಲಿ ಹಚ್ಚಹಸಿರನ್ನು ಆನಂದಿಸಬಹುದಾಗಿದೆ. ಮಳೆಯು ಸಸ್ಯಗಳು ಮತ್ತು ಮರಗಳು ನೈಸರ್ಗಿಕ ಹಚ್ಚ ಹಸಿರನ್ನು ಪ್ರದರ್ಶಿಸುವಂತೆ ಮಾಡುತ್ತದೆ.
ರಿವರ್ ರ್ಯಾಪ್ಟಿಂಗ್….
ಭಾರತದಲ್ಲಿ ರಿವರ್ ರ್ಯಾಪ್ಟಿಂಗ್ (Rivar Rapting) ಎಂಬ ಪದವನ್ನು ಕೇಳಿದಾಗ ಮನಾಲಿಯ ಕಾಡು ಅಥವಾ ಮಲೇಶಿಯಾ ದೇಶದಲ್ಲಿರುವ ನದಿಯನ್ನು ಊಹಿಸಿಕೊಳ್ಳುತ್ತೀರಿ. ಗೋವಾದ ಮಹದಾಯಿ ವನ್ಯಜೀವಿ ಅಭಯಾರಣ್ಯ ಪ್ರದೇಶದ ಬಳಿ ಹೋದಾಗ ಮಹದಾಯಿ ನದಿಯಲ್ಲಿ ರಿವರ್ ರ್ಯಾಪ್ಟಿಂಗ್ ಸೆಟಪ್ ಕಾಣಬಹುದಾಗಿದೆ.
ಜನದಟ್ಟಣೆ ಕಡಿಮೆ….
ಗೋವಾ ರಾಜ್ಯ ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿರುವುದರಿಂದ ಗೋವಾಕ್ಕೆ ಪ್ರಮುಖವಾಗಿ ಸೀಜನ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಸೀಜನ್ ನಲ್ಲಿ ಗೋವಾದಲ್ಲಿ ಜನದಟ್ಟಣೆ ಹೆಚ್ಚಿರುತ್ತದೆ. ಒಂದು ವೇಳೆ ನೀವು ಜನದಟ್ಟಣೆ ಕೊಂಚ ಕಡಿಮೆ ಇರುವಾಗಿ ಗೋವಾಕ್ಕೆ ಆಗಮಿಸಬೇಕೆಂದಿದ್ದರೆ ಮಳೆಗಾಲದ (Rainy season) ಸಂದರ್ಭದಲ್ಲಿ ಗೋವಾಕ್ಕೆ ಭೇಟಿ ನೀಡಬಹುದಾಗಿದೆ. ಮಳೆಗಾಲದ ಸಂದರ್ಭದಲ್ಲಿ ಗೋವಾ ಹಚ್ಚ ಹಸಿರಿಂದ ಶಾಂತತೆಯಿಂದ ಕೂಡಿರುತ್ತದೆ.
ಅಗ್ಗದ ಪ್ರವಾಸ...
ಗೋವಾಕ್ಕೆ ಪ್ರವಾಸಿ ಸೀಜನ್ ನಲ್ಲಿ ಹೋಟೆಲ್ ರೂಂ ಸೇರಿದಂತೆ ಇತರ ಖರ್ಚು ವೆಚ್ಛಗಳು ಹೆಚ್ಚಾಗಿಯೇ ಇರುತ್ತದೆ. ಒಂದುವೇಳೆ ನೀವು ಕಡಿಮೆ ಬಜೇಟ್ ನಲ್ಲಿ ಗೋವಾ ಪ್ರವಾಸ ಮಾಡಬೇಕೆಂದಿದ್ದರೆ ಮಳೆಗಾಲದ ಸಂದರ್ಭದಲ್ಲಿ ಈ ಸುಂದರ ತಾಣಗಳನ್ನು ವೀಕ್ಷಿಸಬಹುದಾಗಿದೆ. ಸೀಜನ್ ಗೆ (Season) ಹೋಲಿಸಿದರೆ ಮಳೆಗಾಲದ ಸಂದರ್ಭದಲ್ಲಿ ಹೋಟೆಲ್ ಖರ್ಚುವೆಚ್ಛ ತುಂಬಾನೇ ಕಡಿಮೆಯಾಗಿರುತ್ತದೆ. ಕಡಿಮೆ ದರದಲ್ಲಿ ಗೋವಾ ಪ್ರವಾಸವನ್ನು ನೀವು ಎಂಜಾಯ್ ಮಾಡಬಹುದಾಗಿದೆ.
ಘಾಟ್ ಗಳು
ಕರ್ನಾಟಕ ಭಾಗದಿಂದ ಮಳೆಗಾಲದ ಸಂದರ್ಭದಲ್ಲಿ ಗೋವಾಕ್ಕೆ ಸ್ವಂತ ವಾಹನದಲ್ಲಿ ಆಗಮಿಸುವುದಾದರೆ ಘಾಟ್ ಗಳ ಸುಂದರ ಪ್ರಕೃತಿ (beautiful nature) ನಿಮ್ಮ ಕಣ್ಮನ ಸೆಳೆಯುತ್ತದೆ. ಗೋವಾಕ್ಕೆ ಆಗಮಿಸುವಾಗ ಚೋರ್ಲಾ ಘಾಟ್, ಅನಮೋಡ ಘಾಟ್ ಗಳನ್ನು ಪ್ರವಾಸಿಗರ ಸ್ವರ್ಗದಂತೆ ಕಂಡುಬರುತ್ತದೆ. ಮಹಾರಾಷ್ಟ್ರ ಭಾಗದಿಂದ ಆಗಮಿಸುವಾದರೂ ಕೂಡ ಸುಂದರ ಘಾಟ್ ಗಳು ಇನ್ನಷ್ಟು ಆಕರ್ಷಣೀಯವಾಗಿರುತ್ತದೆ.