ಸುದ್ಧಿಕನ್ನಡ ವಾರ್ತೆ
ಗೋವಾದಿಂದ ಲಖನೌ ತೆರಳುತ್ತಿದ್ದ ವಿಮಾನವು ಹಾರಾಟದ ವೇಳೆ ನಿಯಂತ್ರಣ ಕಳೆದುಕೊಂಡು ತೇಲಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಸಿಎ ಇಂಡಿಗೊ(Indigo) ಕಂಪನಿಯಿಂದ ಸ್ಪಷ್ಠೀಕರಣ ವರದಿ ಕೇಳಿದೆ. ಏರ್ ಟರ್ಬುಲೆನ್ಸನಿಂದಾಗಿ ಈ ಘಟನೆ ನಡೆದಿದೆ ಎಂದು ಇಂಡಿಗೊ ಕಂಪನಿ ಸ್ಪಷ್ಠೀಕರಣ ನೀಡಿದೆ. ಕಳೆದ ಸೋಮವಾರ ಇಂಡಿಗೊ ವಿಮಾನವು ಗೋವಾದಿಂದ ಲಖನೌ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿತ್ತು.
ಇಂಡಿಗೊ ವಿಮಾನ ಗೋವಾದಿಂದ ಲಖನೌ (Goa to Lucknow) ತಲುಪಿದ ನಂತರ ಮಹಿಳಾ ಪ್ರವಾಸಿಯೋರ್ವರು ತಮ್ಮ ಇನ್ ಸ್ಟಾಗ್ರಾಂ ನಲ್ಲಿ ವೀಡಿಯೋ ಅಪ್ ಲೋಡ್ ಮಾಡಿದ್ದರು.
ಗೋವಾದಿಂದ ಇಂಡಿಗೊ ಕಂಪನಿಯ 6ಇ-6811 ವಿಮಾನವು ಕಳೆದ ಸೋಮವಾರ ಮಧ್ಯಾನ್ಹ 3.48 ಕ್ಕೆ ಲಖನೌಗೆ ಪ್ರಯಾಣ ಬೆಳೆಸಿದ ಸಂದರ್ಭದಲ್ಲಿ ವಿಮಾನವು ನಿಯಂತ್ರಣ ಕಳೆದುಕೊಂಡು ತೇಲಾಡಿತ್ತು. ಇಷ್ಟೇ ಅಲ್ಲದೆಯೇ ಭೂಮಿಯ ಬದಿಗೆ ಬರುತ್ತಿತ್ತು. ವಿಮಾನ ಅಪಘಾತಕ್ಕೀಡಾಗಲಿದೆ ಎಬ ಭೀಯಿಯಿಂದ ಪ್ರಯಾಣಿಕರು ಕೂಗಾಡಿದ್ದರು ಎಂದು ಮಹಿಳಾ ಪ್ರಯಾಣಿಕರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ (Social media) ವೀಡಿಯೋ ಪೋಸ್ಟ ಮಾಡಿದ್ದರು.
ಈ ಘಟನೆಯಿಂದಾಗಿ ಪ್ರಯಾಣಿಕರಲ್ಲಿ ಭಯ ನಿರ್ಮಾಣವಾಗಿತ್ತು. ಕೂಡಲೇ ವಿಮಾನ ನಿಯಂತ್ರಣಕ್ಕೆ ಬಂತು. ವಿಮಾನವು ಸಂಜೆ 6.8 ಗಂಟೆಗೆ ಅಮೌಸಿ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಇದರಲ್ಲಿ 172 ಪ್ರಯಾಣಿಕರಿದ್ದರು ಎಂದು ಮಹಿಳಾ ಪ್ರಯಾಣಿಕರು ಪೋಸ್ಟ ಮಾಡಿದ್ದರು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಏರ್ ಲೈನ್ಸನಿಂದ DGCA ಸಂಪೂರ್ಣ ವರದಿ ಕೇಳಿತ್ತು. ಈ ಕುರಿತು ಟರ್ಬುಲೆನ್ಸ ಕಾರಣ ನೀಡಿ ಇಂಡಿಗೊ (Indigo) ಕಂಪನಿ ಸ್ಪಷ್ಠೀಕರಣ ನೀಡಿದೆ.