ಸುದ್ಧಿಕನ್ನಡ ವಾರ್ತೆ
Goa: ಜಗತ್ಪ್ರಸಿದ್ಧ ಓಲ್ಡ ಗೋವಾ ಸಂತ ಫ್ರಾನ್ಸಿಸ್ ಜೇವಿಯರ್ ಚರ್ಚನಲ್ಲಿ ಸಂತ ಫ್ರಾನ್ಸಿಸ್ ರವರ ಶವ ದರ್ಶನಕ್ಕೆ ಪೋಪ್ ಫ್ರಾನ್ಸಿಸ್ (Pope Francis)ರವರನ್ನು ನಿಮಂತ್ರಿಸಲು ಕೇಂದ್ರವು ವಿಫಲವಾದ ಹಿನ್ನೆಲೆಯಲ್ಲಿ ಗೋವಾದಲ್ಲಿ ಕ್ರೈಸ್ತ ಸಮುದಾಯಕ್ಕೆ ನಿರಾಸೆಯುಂಟಾಗಿದೆ. ಪೋಪ್ ಫ್ರಾನ್ಸಿಸ್ ರವರನ್ನು ಆಮಂತ್ರಿಸಲು ಬಿಜೆಪಿ ಡಬಲ್ ಎಂಜಿನ್ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ (BJP double engine government)ಗೋವಾದ ಸ್ಥಳೀಯ ಕ್ರೈಸ್ತ ಸಮುದಾಯದ ಭಾವನೆಗೆ ಧಕ್ಕೆಯುಂಟಾಗಿದೆ ಎಂದು ಗೋವಾದ ಪ್ರತಿಪಕ್ಷದ ನಾಯಕ ಯೂರಿ ಅಲೆಮಾಂವ ಟೀಕಿಸಿದ್ದಾರೆ.
ಈ ಕುರಿತಂತೆ ಕ್ಯಾಥ್ಲಿಕ್ ಅಸೋಸಿಯೇಶನ್ ಆಫ್ ಗೋವಾ ಕೂಡ ಬೇಸರ ವ್ಯಕ್ತಪಡಿಸಿದೆ. ವಿದೇಶಿ ಮಂತ್ರಾಲಯದಿಂದ ಕೂಡ ಪೋಪ್ ಫ್ರಾನ್ಸಿಸ್ ರವರಿಗೆ ಯಾವುದೇ ಆಮಂತ್ರಣ ತಲುಪಿಲ್ಲ ಎನ್ನಲಾಗಿದೆ.
ಸಂತ ಫ್ರಾನ್ಸಿಸ್ ಶವದರ್ಶನ ಸಮಾರಂಭ
ಗೋವಾದ ಸಂತ್ ಫ್ರಾನ್ಸಿಸ್ ಜೇವಿಯರ್ ಶವ ದರ್ಶನ ಸಮಾರಂಭವು 2024 ರ ನವೆಂಬರ್ 21 ರಿಂದ 2025 ಜನವರಿ 4 ರವರೆಗೆ ನಡೆಯಲಿದೆ. ಪ್ರಸಕ್ತ ಬಾರಿಯ ಕಾರ್ಯಕ್ರಮವನ್ನು ಅಂತರಾಷ್ಟ್ರೀಯ ಉತ್ಸವವ್ನಾಗಿ ಆಚರಿಸಲು ಗೋವಾ ಸರ್ಕಾರ ಸಿದ್ಧತೆಯನ್ನೂ ನಡೆಸಿದೆ. ಈ ಸಮಾರಂಭವು 45 ದಿನಗಳ ಕಾಲ ನಡೆಯಲಿದೆ. ಜಗತ್ತಿನಾದ್ಯಂತ ಭಕ್ತಾದಿಗಳು ಮತ್ತು ಪ್ರವಾಸಿಗರು ಪ್ರತಿದಿನ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ. ಸಂತ್ ಫ್ರಾನ್ಸುಸ್ ಜೇವಿಯರ್ ಶವ ದರ್ಶನ ಸಮಾರಂಭವು ಪ್ರತಿ 10 ವರ್ಷಗಳಿಗೊಮ್ಮೆ ನಡೆಯುತ್ತದೆ.