ಸುದ್ಧಿಕನ್ನಡ ವಾರ್ತೆ
Goa : ಕರ್ನಾಟಕ ಮೂಲದ ಸುರೇಶ್ ಖಡಲ್ಕರ್ ಎಂಬ ವ್ಯಕ್ತಿಯ ಮೃತದೇಹ ಗುರುವಾರ ಬೆಳಿಗ್ಗೆ ಸವಡಿಮಲ್ ನ ಸ್ಟೆಪ್ ಇನ್ ಬಾರ್ ಮತ್ತು ರೆಸ್ಟೋರೆಂಟ್ ನ ಹಿಂದಿನ ಬೀಗ ಹಾಕಿದ ಕೋಣೆಯಲ್ಲಿ ಪತ್ತೆಯಾಗಿದೆ. ಶವ ಊದಿಕೊಂಡು ಕೊಳೆತ ಸ್ಥಿತಿಯಲ್ಲಿತ್ತು ಎನ್ನಲಾಗಿದೆ.
ಸವಡಿಮಲ್ ನ ಮಹಿಳೆಯೊಬ್ಬರು ತಮ್ಮ ವೃದ್ಧ ಪೆÇೀಷಕರನ್ನು ನೋಡಿಕೊಳ್ಳಲು ಜಾಖರ್ಂಡ್ ನ ಯುವತಿಯನ್ನು ಮತ್ತು ಕರ್ನಾಟಕದ ಸುರೇಶ್ ಖಡಲ್ಕರ್ ಅವರನ್ನು ಕೇರ್‍ಟೇಕರ್ ಗಳಾಗಿ ನೇಮಿಸಿಕೊಂಡಿದ್ದರು. ಅವರು ತಮ್ಮ ಸ್ವಂತ ಬಂಗಲೆಯ ಹಿಂದೆ ಇಬ್ಬರಿಗೂ ಇರಲು ವ್ಯವಸ್ಥೆ ಮಾಡಿದ್ದರು. ಸುರೇಶ್ ಕಳೆದ ಎರಡು ದಿನಗಳಿಂದ ಕೆಲಸಕ್ಕೆ ಬರಲಿಲ್ಲ. ಇದರಿಂದಾಗಿ ಮಾಲೀಕರು(ಮಹಿಳೆ) ಸುರೇಶ್ ಅವರ ಕೋಣೆಗೆ ಹೋಗಿ ಪರಿಶೀಲಿಸಿದರು. ಕೋಣೆ ಒಳಗಿನಿಂದ ಲಾಕ್ ಆಗಿತ್ತು ಮತ್ತು ಒಳಗಿನಿಂದ ಕೆಟ್ಟ ವಾಸನೆ ಬರುತ್ತಿತ್ತು. ಮಾಲೀಕರು ತಕ್ಷಣ ಅಗ್ನಿಶಾಮಕ ದಳ ಮತ್ತು ಪೆÇಲೀಸರಿಗೆ ಕರೆ ಮಾಡಿದರು.
ಗುರುವಾರ ಮಧ್ಯಾಹ್ನ 12.45 ರ ಸುಮಾರಿಗೆ ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪಿ ಕೋಣೆಯ ಬಾಗಿಲು ತೆರೆದರು. ಸುರೇಶ್ ಅವರ ಮೃತದೇಹ ಕೋಣೆಯಲ್ಲಿ ಊದಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದೆ. ಪಂಚನಾಮೆಯನ್ನು ನಡೆಸಿದ ನಂತರ ಪೆÇಲೀಸರು ಶವವನ್ನು ವಶಕ್ಕೆ ಪಡೆದಿದ್ದಾರೆ. ಸುರೇಶ್ ಅವರ ಸಾವಿನ ನಿಖರ ವಿಧಾನ ಶವಪರೀಕ್ಷೆಯ ನಂತರವೇ ಬಹಿರಂಗಗೊಳ್ಳಲಿದೆ. ಪೆÇಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.