ಸುದ್ದಿಕನ್ನಡ ವಾರ್ತೆ
Goa : ಆಷಾಢ ಏಕಾದಶಿಯ ಅಂಗವಾಗಿ ಪ್ರತಿ ವರ್ಷ ಗೋವಾದಿಂದ ಬೃಹತ್ ಸಂಖ್ಯೆಯಲ್ಲಿ ಭಕ್ತಾದಿಗಳು ಪಾದಯಾತ್ರೆಯ ಮೂಲಕಪಂಡರಪುಯರಕ್ಕೆ ತೆರಳುತ್ತಾರೆ. ಈ ಭಕ್ತಾದಿಗಳಿಗೆ ಪಂಡರಪುರದಲ್ಲಿ ವಸತಿ ಸೌಲಭ್ಯ ಲಭಿಸುವಂತಾಗಬೇಕು. ಈ ಹಿನ್ನೆಲೆಯಲ್ಲಿ ಪಂಡರಪುರದಲ್ಲಿ “ಗೋವಾ ಭವನ”(Goa Bhavan) ನಿರ್ಮಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಘೋಷಿಸಿದ್ದಾರೆ.
ಗೋವಾದ ಸಾಖಳಿಯ ರವೀಂದ್ರ ಭವನದಲ್ಲಿ ಆಯೋಜಿಸಿದ್ದ ರಹಿಭಜನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು.
ಪಂಡರಪುರಕ್ಕೆ ಪಾದಯಾತ್ರೆಯ ಮೂಲಕ ತೆರಳುವ ಭಕ್ತಾದಿಗಳಿಗಾಗಿ ಪಂಡರಪುರದಲ್ಲಿ ಗೋವಾ ಭವನ ನಿರ್ಮಿಸುವುದು ರಾಜ್ಯ ಸರ್ಕಾರದ ಕನಸಾಗಿದೆ. ಇದಕ್ಕಾಗಿ ಸುಮಾರು 4000 ಚೌರಸ್ ಮೀಟರ್ ಜಾಗ ಲಭಿಸಿದರೆ ಸರ್ಕಾರ ಶೀಘ್ರದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ. ಗೋವಾದಿಂದ ಪಂಡರಪುರಕ್ಕೆ ತೆರಳುವ ಪಾರಂಪರಿಕ ಪಾದಯಾತ್ರಿಗಳನ್ನು ಗಮನದಲ್ಲಿಟ್ಟುಕೊಂಡು ಗೋವಾದಿಂದ ಪಂಡರಪುರಕ್ಕೆ ತೆರಳುವ ಭಕ್ತಾದಿಗಳಿಗೆ ಅಗತ್ಯ ಸೌಲಭ್ಯ ಲಭಿಸುವಂತಾಗಬೇಕು ಎಂಬುದೇ ಪಂಡರಪುರದಲ್ಲಿ ಗೋವಾ ಭವನ ನಿರ್ಮಿಸುವ ಮುಖ್ಯ ಉದ್ದೇಶವಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.
ಈ ಕುರಿತಂತೆ ಅಲ್ಲಿನ ಜಿಲ್ಲಾಧಿಕಾರಿಗಳ ಸಂಪರ್ಕ ಮಾಡಲಾಗಿದ್ದು ಶೀಘ್ರದಲ್ಲಿಯೇ ಈ ಕನಸು ನನಸಾಗಲಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.