ಸುದ್ದಿಕನ್ನಡ ವಾರ್ತೆ
Goa: ಪೆÇಂಡಾ ಮೂಲದ ಉದ್ಯಮಿ ಸಂದೀಪ್ ಚೌಧರಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆÇಂಡಾ ಪೆÇಲೀಸರು ಮಂಗಳೂರಿನ ಉದ್ಯಮಿ 23 ವರ್ಷದ ಮುನೀರ್ ಶಫೀಕ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಮುಂಬೈಗೆ ತೆರಳುತ್ತಿದ್ದಾಗ ಶಫೀಕ್ ನನ್ನು ಕೊಲ್ಹಾಪುರದಿಂದ ಬಂಧಿಸಲಾಗಿದೆ. ಪೆÇಂಡಾ ಡಿವೈಎಸ್ಪಿ ಶಿವರಾಮ್ ವೈಂಗಣಕರ್ ಅವರು ನೀಡಿರುವ ಮಾಹಿತಿಯ ಪ್ರಕಾರ-, ಅಪಹರಣವು ವ್ಯವಹಾರ ಪೈಪೆÇೀಟಿ ಮತ್ತು ಇಬ್ಬರ ನಡುವಿನ ಆರ್ಥಿಕ ವಿವಾದದಿಂದ ಉಂಟಾಗಿದೆ. ಸ್ಕ್ರ್ಯಾಪ್ ವ್ಯವಹಾರದಲ್ಲಿ ತೊಡಗಿರುವ ಚೌಧರಿ ಅವರನ್ನು ಪೆÇಂಡಾದಲ್ಲಿ ಶಫೀಕ್ ಅವರ ಐದು ಉದ್ಯೋಗಿಗಳು ಅಪಹರಿಸಿದ್ದರೆ, ಶಫೀಕ್ ಪ್ರತ್ಯೇಕ ಕಾರಿನಲ್ಲಿ ಅಪಹರಣಕಾರರನ್ನು ಹಿಂಬಾಲಿಸಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.

ರಾಜಸ್ಥಾನದವರಾದ ಪ್ರಸ್ತುತ ಫೆÇೀಂಡಾದಲ್ಲಿ ವಾಸಿಸುತ್ತಿರುವ ಚೌಧರಿ ಅವರನ್ನು ಮಂಗಳವಾರ ಅಪಹರಿಸಲಾಗಿತ್ತು. ಜ್ಯೋಫಿಲ್ ನಗರದಲ್ಲಿ ವಾಸಿಸುವ ಸಂದೀಪ್ ಚೌಧರಿ (38) ಮಧ್ಯಾಹ್ನ ಎಂದಿನಂತೆ ತಮ್ಮ ಕಚೇರಿಗೆ ಹೋಗಿದ್ದರು. ಅವರು ಕಚೇರಿ ತಲುಪಿದ ನಂತರ, ಬಿಳಿ ಕಾರಿನಲ್ಲಿ ಬಂದ ಜನರು ಅವರನ್ನು ತಮ್ಮ ಕಾರಿನಲ್ಲಿ ಕೂಡಿಹಾಕಿ ಅಪಹರಿಸಿದ್ದರು

ಫೆÇೀಂಡಾದಿಂದ ಅಪಹರಿಸಲ್ಪಟ್ಟ ಉದ್ಯಮಿ ಸಂದೀಪ್ ಚೌಧರಿ ಕಳೆದ ಬುಧವಾರ ಸಂಜೆ ದೇವನಹಳ್ಳಿ-ಬೆಂಗಳೂರಿನಲ್ಲಿ ಪತ್ತೆಯಾಗಿದ್ದರು.