ಸುದ್ದಿಕನ್ನಡ ವಾರ್ತೆ
ಪಣಜಿ: ಭಾರೀ ಮಳೆಯಿಂದಾಗಿ, ಗೋವಾದಲ್ಲಿರು ಜಗತ್ಪ್ರಸಿದ್ಧ ದೂಧ್‍ಸಾಗರ್ ಜಲಪಾತಕ್ಕೆ ಹೋಗುವ ಅರಣ್ಯ ರಸ್ತೆಯನ್ನು ಜೂನ್ 10, 2025 ರಿಂದ ಮುಂದಿನ ಸೂಚನೆ ಬರುವವರೆಗೆ ವಾಹನಗಳ ಪ್ರವೇಶಕ್ಕೆ ಬಂದ್ ಮಾಡಲಾಗಿದೆ ಎಂದು ಗೋವಾ ಸರ್ಕಾರ ಆದೇಶ ಹೊರಡಿಸಿದೆ.

ಗೋವಾ ಪ್ರವಾಸೋದ್ಯಮದ ಮೂಲಕ ಆನ್‍ಲೈನ್ ಬುಕಿಂಗ್ ಮೂಲಕ ಟ್ರ್ಯಾಕಿಂಗ್ ತೆರೆದಿರಲಿದ್ದು ಬೆಳಿಗ್ಗೆ 7:30 ರಿಂದ ಬೆಳಿಗ್ಗೆ 11:00 ರವರೆಗೆ ಪ್ರವೇಶವಿದೆ; ಪ್ರಕೃತಿ ಮಾರ್ಗದರ್ಶಿ ಶುಲ್ಕವನ್ನು ಪ್ರತಿ ವ್ಯಕ್ತಿಗೆ ರೂ. 300 ಕ್ಕೆ ಪರಿಷ್ಕರಿಸಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜೀಪ್ ಮೂಲಕ ದೂಧಸಾಗರ ಜಲಪಾತ ಪ್ರವಾಸೋದ್ಯಮ ಬಂದ್ ಮಾಡಲಾಗುತ್ತದೆ.

ಜಗತ್ಪ್ರಸಿದ್ಧ ದೂಧಸಾಗರ ಜಲಪಾತ ಮಳೆಗಾಲದ ಸಂದರ್ಭದಲ್ಲಿ ಭಾರಿ ಪ್ರಮಾಣದ ಒಳಹರಿವಿನ ಹೆಚ್ಚಳದಿಂದ ಮೈದುಂಬಿ ಹರಿಯುತ್ತದೆ. ದೂದ್ ಸಾಗರ ಜಲಪಾತಕ್ಕೆ ಜೀಪ್ ಮೂಲಕ ತೆರಳಬೇಕಾದರೆ ಕೆಲ ಸ್ಥಳಗಳಲ್ಲಿ ನದಿಯನ್ನು ದಾಟಬೇಕಾಗುತ್ತದೆ, ಇದು ಅಸಾಧ್ಯವಾಗಿರುತ್ತದೆ. ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿರುವುದರಿಂದ ಈ ಮಾರ್ಗದ ಮೂಲಕ ದೂಧಸಾಗರ ಪ್ರವೇಶಕ್ಕೆ ನಿರ್ಬಧ ಹೇರಲಾಗಿದೆ.