ಸುದ್ದಿಕನ್ನಡ ವಾರ್ತೆ
Goa : ಹವಾಮಾನ ಇಲಾಖೆಯು ಮಾನ್ಸೂನ್ ನ ಅಂತಿಮ ದೀರ್ಘಾವಧಿ ಮುನ್ಸೂಚನೆಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ, ಈ ವರ್ಷ ಗೋವಾ ಸೇರಿದಂತೆ ಇಡೀ ದೇಶಕ್ಕೆ ಸರಾಸರಿಗಿಂತ ಹೆಚ್ಚಿನ ಮಾನ್ಸೂನ್ ಮಳೆ ಸಾಧ್ಯತೆಯನ್ನು ವ್ಯಕ್ತಪಡಿಸಲಾಗಿದೆ.
ದೇಶದಲ್ಲಿ ಸರಾಸರಿಯ ಶೇ. 106 ರಷ್ಟು ಮಾನ್ಸೂನ್ ಮಳೆಯಾಗುವ ಸಾಧ್ಯತೆಯನ್ನು ಇಲಾಖೆ ವ್ಯಕ್ತಪಡಿಸಿದೆ. ಮಾರ್ಚ್ 1 ರಿಂದ ಮೇ 27 ರವರೆಗೆ ರಾಜ್ಯದಲ್ಲಿ ಸರಾಸರಿ 21.81 ಇಂಚು ಮಳೆಯಾಗಿದೆ. ಈ ವರ್ಷದ ಮಳೆ ಶೇ. 1034.9 ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ, ಮಡ್ಗಾಂವ್ ನಲ್ಲಿ ಅತಿ ಹೆಚ್ಚು 25.64 ಇಂಚು ಮಳೆಯಾಗಿದೆ. ಇದರ ನಂತರ, ಧಾರಾಬಾಂದೋಡಾದಲ್ಲಿ 24.96 ಇಂಚು, ಮುಗಾರ್ಂವ್‍ನಲ್ಲಿ 24.51 ಇಂಚು, ಮಾಪುಸಾದಲ್ಲಿ 24.39 ಇಂಚು ಮತ್ತು ದಾಬೋಲಿಯಲ್ಲಿ 23.58 ಇಂಚು ಮಳೆಯಾಗಿದೆ. ಮಂಗಳವಾರ, ಪಣಜಿಯಲ್ಲಿ ಗರಿಷ್ಠ ತಾಪಮಾನ 29.4 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಕನಿಷ್ಠ ತಾಪಮಾನ 24.5 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಮುಗಾರ್ಂವ್‍ನಲ್ಲಿ ಗರಿಷ್ಠ ತಾಪಮಾನ 28.8 ಡಿಗ್ರಿ ಸೆಲ್ಸಿಯಸ್‍ನಲ್ಲಿ ಉಳಿದಿದ್ದರೆ, ಕನಿಷ್ಠ ತಾಪಮಾನ 24.8 ಡಿಗ್ರಿ ಸೆಲ್ಸಿಯಸ್‍ನಷ್ಟಿತ್ತು. ರಾಜ್ಯದಲ್ಲಿ ಗರಿಷ್ಠ ತಾಪಮಾನ 28 ರಿಂದ 29 ಡಿಗ್ರಿ ಸೆಲ್ಸಿಯಸ್‍ನಷ್ಟಿದ್ದರೆ, ಕನಿಷ್ಠ ತಾಪಮಾನ ಮುಂದಿನ ಆರು ದಿನಗಳವರೆಗೆ 25 ಡಿಗ್ರಿ ಸೆಲ್ಸಿಯಸ್‍ನಷ್ಟಿರುವ ಸಾಧ್ಯತೆಯಿದೆ.
ಮುಂದಿನ ಎರಡು ದಿನಗಳವರೆಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದ್ದು, ಮೇ 30 ರಿಂದ ಜೂನ್ 2 ರವರೆಗೆ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಹೇಳಿದೆ.