ಸುದ್ದಿಕನ್ನಡ ವಾರ್ತೆ
Goa : ಗೋವಾದ ಮಾಪ್ಸಾದ ತಿಳಾರಿ ಕಾಲುವೆಯಲ್ಲಿ ಮುಳುಗಿ ಮಾಪ್ಸಾದ 26 ವರ್ಷದ ಓಂಕಾರ ಪ್ರಭುದೇಸಾಯಿ ಸಾವನ್ನಪ್ಪಿದ್ದಾರೆ. ಗುರುವಾರ ಮಧ್ಯಾನ್ಹ ಕುಚೇಲಿ ದತ್ತಪ್ರಸಾದ ಕಾಲನಿ ಬಳಿಯಿರುವ ನಾಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ತನ್ನ ಮಿತ್ರರೊಂದಿಗೆ ನಾಲೆಗೆ ಸ್ನಾನಕ್ಕಿಳಿದಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

ಓಂಕಾರ ಪ್ರಭುದೇಸಾಯಿ ರವರು ತನ್ನ ಮಿತ್ರರೊಂದಿಗೆ ತಿಳಾರಿ ಕಾಲುವೆ ವೀಕ್ಷಿಸಲು ಬಂದಿದ್ದರು. ಓಂಕಾರ ರವರು ಈಜಲೆಂದು ನೀರಿಗೆ ಧುಮುಕಿದರು, ಆದರೆ ಹಲವು ಸಮಯ ಕಳೆದರೂ ಇವರು ನೀರಿಂದ ಮೇಲಕ್ಕೆ ಬಂದಿಲ್ಲ. ಕೂಡಲೇ ಅಗ್ನಿಶಾಮಕ ದಳಕ್ಕೆ ಮಿತ್ರರು ಮಾಹಿತಿ ನೀಡಿದರು.

ಅಗ್ನಿಶಾಮಕ ದಳ ಹಾಗೂ ಮಾಪ್ಸಾ ಪೋಲಿಸರು ಘಟನಾ ಸ್ಥಳಕ್ಕೆ ಧಾವಿಸಿ ಬಂದು ನೀರಲ್ಲಿ ಮುಳುಗಿದ್ದ ಓಂಕಾರ ಪ್ರಭುದೇಸಾಯಿ ರವರನ್ನು ನೀರಿಂದ ಮೇಲೆತ್ತಿದರು. ಮೃತದೇಹವನ್ನು ಗೋವಾ ಬಾಂಬೋಲಿಂ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.