ಸುದ್ಧಿಕನ್ನಡ ವಾರ್ತೆ

Goa: ಕಳೆದ ಕೆಲ ದಿನಗಳಿಂದ ಮಳೆಯು ಗೋವಾದಲ್ಲಿ ವಿಶ್ರಾಂತಿ ಪಡೆದಿದೆ. ಮಳೆಯ ವಿಶ್ರಾಂತಿಯ ನಂತರ ರಾಜ್ಯದಲ್ಲಿ ತಾಪಮಾನ ಕೂಡ ತೀವ್ರ ಹೆಚ್ಚಳವಾಗಿದೆ. ಆದರೆ ಮುಂದಿನ ಎಂಟು ದಿನಗಳಲ್ಲಿ ಗೋವಾ ರಾಜ್ಯದಲ್ಲಿ ಮಳೆಯಾಗುವ ನಿರೀಕ್ಷೆಯನ್ನು ರಾಜ್ಯ ಹವಾಮಾನ ಇಲಾಖೆ ವ್ಯಕ್ತಪಡಿಸಿದೆ.

ಕಳೆದ ಕೆಲ ದಿನಗಳ ವಿಶ್ರಾಂತಿಯ ನಂತರ ಮತ್ತೆ ಮಳೆ ಆರಂಭಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಹಿನ್ನೆಲೆಯಲ್ಲಿ ಬರುವ ಸೋಮವಾರ ಮತ್ತು ಮಂಗಳವಾರ ಮಳೆಯಾಗುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಎರಡು ದಿನ ಯಲ್ಲೊ ಅಲರ್ಟ ಜಾರಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ 30 ರಿಂದ 40 ಕಿ.ಮಿ ಪ್ರತಿ ಗಂಟೆಗೆ ಗಾಳಿ ಬೀಸುವ ಸಾಧ್ಯತೆಯಿದೆ ಈ ದಿನದಲ್ಲಿ ಗುಡುಗು ಸಹಿತ ಮಳೆಯ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕಳೆದ ತಿಂಗಳು ಗೋವಾ ರಾಜ್ಯಾದ್ಯಂತ ಭಾರಿ ಮಳೆಯಾಗಿದೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇಖಡಾವಾರು ಪ್ರಮಾಣಕಿಂತ ಗೋವಾದಲ್ಲಿ ಹೆಚ್ಚಿನ ಮಳೆಯಾಗಿದೆ. ಇದರಿಂದಾಗಿ ಗೋವಾದಲ್ಲಿ ಅಡಿಕೆ ಬೆಳೆಗೆ ರೋಗ ತಗುಲಿದ್ದು, ಅಡಿಕೆ ಉದುರುತ್ತಿದ್ದು, ರೈತರು ಕಂಗಾಲಾಗಿದ್ದಾರೆ.