ಸುದ್ಧಿಕನ್ನಡ ವಾರ್ತೆ
Goa: ಬೆಳಗಾವಿ ಖಾಡೆ ಬಜಾರದಲ್ಲಿ ಶನಿವಾರ ಮಧ್ಯಾನ್ಹ ಭೀಕರ ಘಟನೆಯೊಂದು ನಡೆದಿರುವ ಬಗ್ಗೆ ಮಾಹಿತಿ ಹೊರಬಿದ್ದಿದ್ದು, ಶನಿವಾರ ಮಧ್ಯಾನ್ಹ 1.30 ರ ಸುಮಾರು ಗೋವಾದ ಎಂಜಿಪಿ ಮಾಜಿ ಶಾಸಕ ಲವು ಮಾಮಲೇದಾರ್ ನಿಧನರಾಗಿದ್ದಾರೆ.

ಬೆಳಗಾವಿಯಲ್ಲಿ ರಿಕ್ಷಾ ಚಾಲಕನೊಂದಿಗೆ ಉಂಟಾಗಿದ್ದ ಜಗಳದಲ್ಲಿ ಅವರು ಅಸ್ವಸ್ಥಗೊಂಡಿದ್ದರು. ಈ ಸಂದರ್ಭದಲ್ಲಿ ರಿಕ್ಷಾ ಚಾಲಕ ಶಾಸಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ.

ಈ ಕುರಿತಂತೆ ಲಭ್ಯವಾಗಿರುವ ಮಾಹಿತಿಯ ಅನುಸಾರ-ಈ ಘಟನೆಗೆ ಸಂಬಂಧಿಸಿದಂತೆ ರಿಕ್ಷಾ ಚಾಲಕನನ್ನು ಪೋಲಿಸರು ವಷಕ್ಕೆ ಪಡೆದಿದ್ದಾರೆ. ಮಾಜಿ ಶಾಸಕ ಲವು ಮಾಮಲೇದಾರ್ ರವರೊಂದಿಗೆ ರಿಕ್ಷಾ ಚಾಲಕ ವಾಗ್ವಾದಕ್ಕೆ ಇಳಿದಿದ್ದ ಎನ್ನಲಾಗಿದೆ. ಇದರಿಂದಾಗಿ ಅವರು ತೀರಾ ಅಸ್ವಸ್ಥಗೊಂಡಿದ್ದರು. ಈ ಘಟನೆಯ ನಂತರ ಲವು ಮಾಮಲೇದಾರ್ ರವರನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿದೆ. ಪ್ರಾಥಮಿಕವಾಗಿ ಲಭ್ಯವಾಗಿರುವ ಮಾಹಿತಿಯ ಅನುಸಾರ ಲವು ಮಾಮಲೇದಾರ್ ರವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನಲಾಗಿದೆ.

ರಿಕ್ಷಾ ಚಾಲಕನಿಂದ ಹಲ್ಲೆ..!

ಮಾಜಿ ಶಾಸಕ ಲವೂ ಮಾಮಲೆದಾರ್ ರವರ ಮೇಲೆ ಭಿಕ್ಷಾ ಚಾಲಕ ಹಲ್ಲೆ ನಡೆಸಿದ್ದಾನೆ. ಈ ಘಟನೆಯ ನಂತರ ಅವರು ತೀವ್ರ ಅಸ್ವಸ್ಥಗೊಂಡಿದ್ದರು ಎನ್ನಲಾಗಿದೆ.