ಸುದ್ದಿಕನ್ನಡ ವಾರ್ತೆ
Goa : ಗೋವಾ ಬೋರ್ಡ ಆಫ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿಯ 12 ನೇಯ ತರಗತಿಯ ಬೋರ್ಡ ಪರೀಕ್ಷೆಯು ಸೋಮವಾರದಿಂದ ಆರಂಭಗೊಂಡಿದೆ.
ಗೋವಾ ರಾಜ್ಯದ 20 ಕೇಂದ್ರಗಳಲ್ಲಿ ನಡೆಯುವ ಈ ಪರೀಕ್ಷೆಗೆ ಕಲೆ,ವಾಣಿಜ್ಯ,ವಿಜ್ಞಾನ, ಮತ್ತು ವೃತ್ತಿಪರ ವಿಭಾಗದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.
ಗೋವಾದಲ್ಲಿ 12 ನೇಯ ತರಗತಿಯ ಪರೀಕ್ಷೆಯು ಬೆಳಿಗ್ಗೆ 9.30 ಕ್ಕೆ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳು ನಿಗಧಿತ ಸಮಯಕ್ಕಿಂತ ಕನಿಷ್ಠ 45 ನಿಮಿಷ ಮೊದಲು ತಮ್ಮ ಪರೀಕ್ಷಾ ಕೇಂದ್ರಕ್ಕೆ ತಲುಪಲು ಸೂಚಿಸಲಾಗಿದೆ. ಪ್ರಸಕ್ತ ವರ್ಷ 12 ನೇಯ ತರಗತಿಯ ಪರೀಕ್ಷೆಯಲ್ಲಿ ಒಟ್ಟೂ 17,718 ವಿದ್ಯಾರ್ಥಿಗಳು ಕುಳಿತಿದ್ದಾರೆ.