ಸುದ್ದಿಕನ್ನಡ ವಾರ್ತೆ
Goa: ಗೋವಾದ ವಾಸ್ಕೊ ಬಳಿ ಸಾಂಕೋಲಾ ಪಂಚಾಯತ ವ್ಯಾಪ್ತಿಯಲ್ಲಿರುವ ಬಿಟ್ಸಪಿಲಾನಿ ಕ್ಯಾಂಪಸ್ ನಲ್ಲಿ ಶುಕ್ರವಾರ ಬಾಂಬ್ ಇರುವುದಾಗಿ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ಸೃಷ್ಠಿಯಾಯಿತು. ಈಮೇಲ್ ಮೂಲಕ ಈ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಭಧ್ರತಾ ಕಾರ್ಯಾಚರಣೆ ನಡೆಸಲಾಯಿತು.
ಬಿಟ್ಸ ಪಿಲಾನಿ ಕ್ಯಾಂಪಸ್ ನಲ್ಲಿ ಭಾರತದಾದ್ಯಂತದ ವಿದ್ಯಾರ್ಥಿಗಳೊಂದಿಗೆ ಮೂರು ದಿನಗಳ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಶುಕ್ರವಾರ ಬೆಳಿಗ್ಗೆ 11 ಗಂಟೆಯ ಸುಮಾರು ಈ ಕ್ಯಾಂಪಸ್ ಸಭಾಂಗಣದಲ್ಲಿ ಆರ್ ಡಿ ಎಕ್ಸ ಇಡಲಾಗಿದೆ ಎಂಬ ಬೆದರಿಕೆ ಈಮೇಲ್ ಬಂದಿತ್ತು. ಕೂಡಲೇ ಬಿಟ್ಸ ಪಿಲಾನಿ ಆಡಳಿತ ಮಂಡಳಿ ಪೋಲಿಸರಿಗೆ ಮಾಹಿತಿ ನೀಡಿತ್ತು. ನಂತರ ಪೋಲಿಸರು ಭಯೋತ್ಪಾದನಾ ನಿಗ್ರಹ ದಳ, ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ, ಅಗ್ನಿಶಾಮಕ ದಳ, ಸ್ಥಳೀಯ ಪೋಲಿಸರು ಸೇರಿದಂತೆ ಕಾರ್ಯಚರಣೆ ನಡೆಸಿದರು.
ಇಂದು ಕ್ಯಾಂಪಸ್ ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವನ್ನೂ ಸ್ಥಗಿತಗೊಳಿಸಲಾಯಿತು. ಸತತ ಶೋಧ ಕಾರ್ಯದ ನಂತರ ಯಾವುದೇ ಸ್ಪೋಟಕಗಳು ಪತ್ತೆಯಾಗಿಲ್ಲ ಎನ್ನಲಾಗಿದೆ.