ಸುದ್ಧಿಕನ್ನಡ ವಾರ್ತೆ
Goa : ಗೋವಾದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದ ನಂತರ ಶಾಲಾ ಸಮಯದಲ್ಲಿ ಹೆಚ್ಚಳ ಮಾಡಬೇಕಾಗಿತ್ತು. ಆದರೆ ಇದರ ಬದಲಾಗಿ ಗೋವಾದಲ್ಲಿ ಏಪ್ರಿಲ್ 1 ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ಶಾಲಾ ಸಮಯವು ಈ ಹಿಂದಿನಂತೆಯೇ ಇರಲಿದೆ ಎಂದು ಗೋವಾ ರಾಜ್ಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಪ್ರಸಾದ್ ಲೋಲಯೇಕರ್ ಸುದ್ಧಿಗಾರರಿಗೆ ಮಾಹಿತಿ ನೀಡಿದ್ದಾರೆ.
ಗೋವಾ ರಾಜ್ಯದಲ್ಲಿ ಹಲವು ಶಾಲೆಗಳಲ್ಲಿ ಬೆಳಿಗ್ಗೆ ಒಂದನೇಯ ಹಂತದ ತರಗತಿಗಳು ಮತ್ತು ಎರಡನೇಯ ಹಂತದ ತರಗತಿಗಳು ಮಧ್ಯಾನ್ಹ ನಡೆಯುತ್ತದೆ. ಶಾಲಾ ಸಮಯವನ್ನು ವಿಸ್ತರಿಸಬೇಕಾದರೆ ಎರಡು ಗಂಟೆಗಳಿಗಿಂತಲೂ ಹೆಚ್ಚು ವಿಸ್ತರಣೆ ಮಾಡಲು ಸಾಧ್ಯವಿಲ್ಲ. ಇದರಿಂದಾಗಿ ಏಪ್ರಿಲ್ 1 ರಿಂದ ಹೊಸ ಶೈಕ್ಷಣಿಕ ವರ್ಷ ಪ್ರಾರಂಭಿಸಿದ್ದರಿಂದ ಶಾಲಾ ಸಮಯ ಹೆಚ್ಚು ಮಾಡುವ ಅಗತ್ಯವಿಲ್ಲ. ಚತುರ್ಥಿ,ದೀಪಾವಳಿ, ಕ್ರಿಸ್ ಮಸ್ ಹಬ್ಬದ ರಜೆಗಳಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ದೀಪಾವಳಿ ರಜಾ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕೆಲವು ಪಠ್ಯೇತರ ಚಟುವಟಿಕೆ ಮಾಡಲು ಸಿರ್ಧರಿಸಿದ್ದೇವೆ ಎಂದು ಪ್ರಸಾದ ಲೋಲಯೇಕರ್ ನುಡಿದರು.