ಸುದ್ಧಿಕನ್ನಡ ವಾರ್ತೆ
Goa : ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಗೋಮಂತಕೀಯರು ತೆರಳಿ ಪವಿತ್ರ ಸ್ನಾನ ಮಾಡಕು ದೇವದರ್ಶನ ಯೋಜನೆಯ ಅಡಿ ಇಂದೂ ಭಕ್ತರನ್ನು ಪ್ರಯಾಗರಾಜ್ ಗೆ ಕಳುಹಿಸಲು ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರ ಬಳಿ ಮನವಿ ಮಾಡಿದ್ದೇನೆ.

ಗೋಮಂತಕೀಯರಿಗೆ ಶೀಘ್ರವೇ ಈ ವಿಶೇಷ ರೈಲು ಬಿಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ನನ್ನ ಮನವಿಯನ್ನು ಪೂರ್ಣಗೊಳಿಸುತ್ತಿರುವುದಕ್ಕೆ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಶಾಸಕ ಕೃಷ್ಣಾ(ದಾಜಿ) ಸಾಲಕರ್ ಹೇಳಿದ್ದಾರೆ.

ಗೋವಾ ರಾಜ್ಯ ಸರ್ಕಾರವು ದೇವದರ್ಶನ ಯೋಜನೆಯನ್ನು ಪುನರಾರಂಭಿಸುವ ಮೂಲಕ ಗೋವಾದ ಭಕ್ತರನ್ನು ಪ್ರಯಾಗರಾಜ್ ಗೆ ಕರೆದೊಯ್ಯಲಾಗುವುದು. ಈ ವಿಷಯ ಎಲ್ಲರಿಗೂ ಆನಂದವನ್ನುಂಟುಮಾಡಿದೆ. ಗೋಮಂತಕೀಯ ಭಕ್ತರಿಗೆ 144 ವರ್ಷಗಳ ಬಳಿಕ ನಡೆಯುತ್ತಿರುವ ಈ ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳಲು ದೇವದರ್ಶನ ಯೋಜನೆಯ ಅಡಿಯಲ್ಲಿ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ದೇವೆ ಎಂದು ದಾಜಿ ಸಾಲಕರ್ ಮಾಹಿತಿ ನೀಡಿದ್ದಾರೆ.

ಮುಂಬರುವ ದಿನಗಳಲ್ಲಿ ಎಲ್ಲ ಧರ್ಮದ ಜನರನ್ನು ತಿರುಪತಿ, ಶಿರಡಿ,ವಲಂಕಣಿ,ಅಜ್ಮೀರ್ ಚರೀಫ್ ಮುಂತಾದ ಧಾರ್ಮಿಕ ಸ್ಥಳಗಳಿಗೆ ಕರೆದೊಯ್ಯಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ದಾಜಿ ಸಾಲ್ಕರ್ ಹೇಳಿದರು.