ಸುದ್ಧಿಕನ್ನಡ ವಾರ್ತೆ
Goa : ಇದೀಗ ವಿದೇಶಿ ಮಹಿಳೆಗೆ ಗೋವಾದ ಮೋಬರ್ ಬೀಚ್ ನಲ್ಲಿ 5 ನಾಯಿಗಳು ಧಾಳಿ ನಡೆಸಿರುವುದು ಮತ್ತೆ ಚರ್ಚೆಗೆ ಕಾರಣವಾಗಿದೆ. ಒಂದೇ ವೇಳೆಗೆ ಬೀಚ್ ನಲ್ಲಿ 5 ನಾಯಿಗಳು ಧಾಳಿ ನಡೆಸಿದ್ದು ಮಹಿಳೆಯ ದೇಹದ ಮೇಲೆ 15 ಕಡೆ ಗಾಯಗಳಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ವಿದೇಶಿ ಮಹಿಳೆಯು ಮೋಬರ್ ಬೀಚ್ ನಲ್ಲಿ ಓಡಾಡುತ್ತಿದ್ದಾಗ ಇದ್ದಕ್ಕಿದ್ದಂತೆಯೇ ನಾಯಿಗಳ ಹಿಂಡು ಧಾಳಿ ನಡೆಸಿದೆ. ಸಹಾಯಕ್ಕಾಗಿ ಕೂಡಲೇ ಈ ವಿದೇಶಿ ಮಹಿಳೆ ಸ್ನೇಹಿತರಿಗೆ ದೂರವಾಣಿ ಕರೆ ಮಾಡಿದ್ದಾಳೆ. ನಂತರ ಅಲ್ಲಿಯೇ ಇದ್ದ ವಾಟರ್ ಸ್ಪೋಟ್ಸ ಚಾಲಕರು ಹಾಗೂ ಹೋಟೆಲ್ ಸುರಕ್ಷಾ ರಕ್ಷಕರು ಬಂದು ನಾಯಿಗಳ ಹಿಂಡನ್ನು ಅಟ್ಟಿದ್ದಾರೆ.
ಈ ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಸ್ಥಳೀಯ ಪಂಚಾಯತಿ ಅಧ್ಯಕ್ಷ ಡಿಕ್ಸನ್ ವಾಜ್ ಸೇರಿದಂತೆ ಇತರ ಪ್ರಮುಖರು ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳೆದ ಹಲವು ದಿನಗಳಿಂದ ಬೀಚ್ ನಲ್ಲಿ ಇಂತಹದ್ದೆ ಘಟನೆ ಮರುಕಳಿಸುತ್ತಿದ್ದು ಸರ್ಕಾರ ಈ ನಿ9ಟ್ಟಿನಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ.