ಸುದ್ಧಿಕನ್ನಡ ವಾರ್ತೆ
Goa Porvorim: ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ರವರು ಜನವರಿ 24 ರಂದು ಶುಕ್ರವಾರ ಸಂಜೆ 6 ಗಂಟೆಗೆ ಪಣಜಿ ಸಮೀಪದ ಪರ್ವರಿಯ ಜೀವೋತ್ತಮ ಮಠದಲ್ಲಿ ಭಕ್ತರಿಗೆ ಆಶೀರ್ವಚನ ನೀಡಲಿದ್ದಾರೆ.

ಸದ್ಯ ಪರ್ವರಿಯ ಜೀವೋತ್ತಮ ಮಠದಲ್ಲಿ ಪ್ರತಿದಿನ ನಡೆಯುತ್ತಿರುವ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಗುರುವಾರ ಜೀವೋತ್ತಮ ಮಠದಲ್ಲಿ ದುರ್ಗಾ ನಮಸ್ಕಾರ ಪೂಜೆ ನೆರವೇರಿಸಲಾಯಿತು. ಶನಿವಾರ ಶ್ರೀಗಳಿಂದ ತಪ್ತ ಮುದ್ರಾ ಧಾರಣೆ ನಡೆಯಲಿದೆ. ಶ್ರೀ ಸತ್ಯನಾರಾಯಣ ಮಹಾಪೂಜೆ ಭಾನುವಾರ ನಡೆಯಲಿದೆ.

ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಶಾಖಾ ಮಠದ ಅಧ್ಯಕ್ಷ ಡಾ. ರಾಜನ್ ಕುಂಕೊಳಿಯೇಕರ್ ಮನವಿ ಮಾಡಿದ್ದಾರೆ.