ಸುದ್ಧಿಕನ್ನಡ ವಾರ್ತೆ
Goa : ಗೋವಾ ಬಿಜೆಪಿ ರಾಜ್ಯಾಧ್ಯಕ್ಷ ದಾಮು ನಾಯ್ಕ ರವರ ದೆಹಲಿ ಭೇಟಿಯು ಭಾರಿ ಚರ್ಚೆಗೆ ಕಾರಣವಾಗಿದೆ. ಆರ್ ಎಸ್ ಎಸ್ ಸಂಘ ಪ್ರಮುಖ ಬಿಎಲ್ ಸಂತೋಷ ರವರನ್ನು ಭೇಟಿ ಮಾಡಿ ದಾಮು ನಾಯ್ಕ ಚರ್ಚೆ ನಡೆಸಿದ್ದಾರೆ.
ದಾಮು ನಾಯ್ಕ ರವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾಪ್ಸಾದಲ್ಲಿ ಕಾರ್ಯಕರ್ತರ ಅಶಿಸ್ತನ್ನು ಸಹಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಪ್ರತಿಯೊಂದು ವಿಷಯದ ಕುರಿತು ನಿರ್ಣಯ ತೆಗೆದುಕೊಳ್ಳುವಾಗ ವಿಚಾರ ಮಾಡಿ ಹೆಜ್ಜೆ ಇಡಲಾಗುವುದು ಎಂದು ದಾಮು ನಾಯ್ಕ ಹೇಳಿದ್ದರು.
ದಾಮು ನಾಯ್ಕ ರವರು ದೆಹಲಿ ಭೇಟಿಯು ಬಿಜೆಪಿ ಪ್ರದೇಶ ಸಮೀತಿ, ಜಿಲ್ಲಾ ಸಮೀತಿ, ವಿವಿಧ ಮೋರ್ಚಾ ನಿಮಂತ್ರಕರು, ಹಾಗೂ ಸದಸ್ಯರ ನಿಯುಕ್ತಿಗೆ ಸಂಬಂಧಿಸಿದಂತೆ ನಿರ್ಣಯ ತೆಗೆದುಕೊಳ್ಳುವುದಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಸಕ್ರೀಯವಾಗಿಲ್ಲದ ಹಲವು ಜನ ಬಿಜೆಪಿ ಪ್ರಮುಖರು ದಾಮುನ ನಾಯ್ಕ ರವರು ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಿದ್ದಂತೆಯೇ ಪಕ್ಷದ ಕಾರ್ಯಾಲಯಕ್ಕೆ ಬಂದಿರುವುದು ವಿಶೇಷವಾಗಿದೆ. ಈ ಹಿನ್ನೆಲೆಯಲ್ಲಿ ಬಿ.ಎಲ್.ಸಂತೋಷ ರವರೊಂದಿಗೆ ದಾಮು ನಾಯ್ಕ ರವರು ಚರ್ಚೆ ನಡೆಸಿರಬಹುದು ಎಂದೇ ಹೇಳಲಾಗುತ್ತಿದೆ.