ಸುದ್ಧಿಕನ್ನಡ ವಾರ್ತೆ
Goa : ಮುಸಲ್ಮಾನ ವಿದ್ಯಾರ್ಥಿಗಳು ಶಾಲೆಗೆ ಬರುವಾಹ ಸಮವಸ್ತ್ರದೊಂದಿಗೆ ಬುರ್ಖಾ ಹಾಕಿಕೊಂಡು ಬರುವಕ್ಕೆ ಬಜರಂಗದಳ ಆಕ್ಷೇಪ ವ್ಯಕ್ತಪಡಿಸಿದೆ. ಆ ಜಾತಿಯ ವಿದ್ಯಾರ್ಥಿಗಳಿಗೆ ಶಾಲೆಗೆ ಬುರ್ಖಾ ಹಾಕಿಕೊಂಡು ಬರಲು ಪರವಾನಗಿಯಿದ್ದರೆ ನಮಗೆ ಶಾಲು ಮತ್ತು ಪೇಟ ಹಾಕಿಕೊಂಡು ಬರಲು ಪರವಾನಗಿ ನೀಡಲೇ ಬೇಕು ಎಂದು ಗೋವಾ ಬಜರಂಗ ದಳ ಆಘ್ರಹಿಸಿದೆ.
ಹೊಸ ಶೈಕ್ಷಣಿಕ ಧೋರಣೆಯ ಅನುಸಾರ ಗೋವಾದ ಮಹಾವಿದ್ಯಾಲಯಗಳಲ್ಲಿ ಸಮವಸ್ತ್ರ ಧರಿಸುವುದು ಖಡ್ಡಾಯವಿದೆ. ಮುಸ್ಲಿಂ ವಿದ್ಯಾರ್ಥಿಗಳು ಗೋವಾದ ಸಾಖಳಿಯಲ್ಲಿ ಸಮವಸ್ತ್ರದೊಂದಿಗೆ ಬುರ್ಖಾ ಹಾಕಿಕೊಂಡು ಬರುವುದಕ್ಕೆ ಬಜರಂಗ ದಳ ಆಕ್ಷೇಪ ವ್ಯಕ್ತಪಡಿಸಿದೆ.
ವಿದ್ಯಾರ್ಥಿಗಳಲ್ಲಿ ಸಮಾನತೆ ಇರಬೇಕು ಎಂಬ ಉದ್ದೇಶದಿಂದ ಶಾಲೆಗಳಲ್ಲಿ ಸಮಸ್ತ್ರ ಖಡ್ಡಾಯವಿದೆ. ಆದರೆ ಕೆಲ ವಿದ್ಯಾರ್ಥಿಗಳು ಇದಕ್ಕೆ ವಿರುದ್ಧವಾಗಿ ವರ್ತಿಸಿದರೆ ಬಜರಂಗ ದಳ ಇದನ್ನು ಒಪ್ಪಿಕೊಳ್ಳುವುದಿಲ್ಲ. ಬಜರಂಗದಳ ಉತ್ತರಗೋವಾ ಸಂಯೋಜಕರು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಗೋವಾದ ಸಾಖಳಿ ಸರ್ಕಾರಿ ಮಹಾವಿದ್ಯಾಲಯದ ಪ್ರಾಚಾರ್ಯರನ್ನು ಭೇಟಿ ಮಾಡಿ ಈ ಕುರಿತು ಮನವಿ ಮಾಡಿದರು.
ಸಮಸ್ತ್ರ ಖಡ್ಡಾಯವಾಗಿ ಧರಿಸದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪ್ರಾಚಾರ್ಯರು ಭರವಸೆ ನೀಡಿದ್ದಾರೆ. ಒಂದು ವೇಳೆ ಅವರು ಈ ಕುರಿತು ಕ್ರಮ ಕೈಗೊಳ್ಳದಿದ್ದರೆ ಬಜರಂಗ ದಳ ಮುಂದಿನ ಹೋರಾಟ ನಡೆಸಲಿದೆ ಎಂಬ ಎಚ್ಚರಿಕೆ ನೀಡಿದ್ದಾರೆ.