ಸುದ್ಧಿಕನ್ನಡ ವಾರ್ತೆ
Goa : ಕಳೆದ ಎರಡು ದಿನಗಳಿಂದ ಅಸಂಖ್ಯಾತ ಕಾರ್ಯಕರ್ತರು ದೂರವಾಣಿಯ ಮೂಲಕವಾಗಿ ಸಂಪರ್ಕಿಸಿ ನೀವು ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಿರುವುದು ನಾವೇ ಅಧ್ಯಕ್ಷರಾದಷ್ಟು ಸಂತಸವಾಗಿದೆ ಎಂದು ಹೇಳಿ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮಾಜಿ ಶಾಸಕ ಹಾಗೂ ನೂತನ ಬಿಜೆಪಿ ರಾಜ್ಯಾಧ್ಯಕ್ಷ ದಾಮು ನಾಯ್ಕ ಪ್ರತಿಕ್ರಯಿಸಿದ್ದಾರೆ. ನೂತನ ಪ್ರದೇಶಾಧ್ಯಕ್ಷರಾಗಿ ಆಯ್ಕೆಯಾಗಿರುವ ದಾಮು ನಾಯ್ಕ ಪ್ರದೇಶಾಧ್ಯಕ್ಷ ಸ್ಥಾನದ ಅಧಿಕಾರ ಸ್ವೀಕರಿಸಿದರು.

ಪಣಜಿಯ ಗೋಮಂತಕ ಮರಾಠಿ ಸಮಾಜದ ಸಭಾಗೃಹದಲ್ಲಿ ದಾಮು ನಾಯ್ಕ ರವರ ಘೋಷಣೆಯಾದ ನಂತರ ಮುಖ್ಯಮಂತ್ರಿ ಪ್ರಮೋದ ಸಾವಂತ್ ಹಾಗೂ ಮಾಜಿ ಪ್ರದೇಶಾಧ್ಯಕ್ಷ ದಾಮು ನಾಯ್ಕ ರವರು ನೂತನ ಪ್ರದೇಶಾಧ್ಯಕ್ಷ ದಾಮು ನಾಯ್ಕ ರವರನ್ನು ಬಿಜೆಪಿ ಕಾರ್ಯಾಲಯಕ್ಕೆ ಕರೆದೊಯ್ದು ಬಿಜೆಪಿ ಪ್ರದೇಶಾಧ್ಯಕ್ಷ ಸ್ಥಾನದಲ್ಲಿ ಕೂರಿಸಿ ಜವಾಬ್ದಾರಿ ಹಸ್ತಾಂತರಿಸಿದರು.