ಸುದ್ಧಿಕನ್ನಡ ವಾರ್ತೆ
Goa Metro: ಗೋವಾ ರಾಜ್ಯದಲ್ಲಿನ ಶಹರಗಳನ್ನು ಜೋಡಿಸಲು ಇದೀಗ ಮೆಟ್ರೋ ಮೂಲಕ ಜೋಡಿಸಲು ಗೋವಾ ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿದೆ. ಈ ಯೋಜನೆಗಾಗಿ 5,0000 ಕೋಟಿ ರೂ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಕೊಂಕಣ ರೈಲ್ವೆ ಮಹಾಮಂಡಳದ ಮಾಧ್ಯಮದಿಂದ ಯೋಜನೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಈ ಕುರಿತಂತೆ ಮುಖ್ಯಮಂತ್ರಿ ಪ್ರಮೋದ ಸಾವಂತ್ ಸುದ್ಧಿಗಾರರೊಂದಿಗೆ ಮಾತನಾಡಿ- ಗೋವಾ ರಾಜ್ಯದಲ್ಕಿ ರಸ್ತೆಗಳಳ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಇದಕ್ಜಾಗಿ ಪರ್ಯಾಯ ಸಾರಿಗೆ ವ್ಯವಸ್ಥೆಯ ವಿಚಾರ ಮಾಡುವಂತಾಗಿದೆ. ಇದಕ್ಕಾಗಿ ಗೋವಾದಲ್ಲಿ ಮೆಟ್ರೊ ವೊಂದೇ ಪರ್ಯಾಯವಾಗಿದೆ. ಈ ಹಿಂದಿನ ಸರ್ಕಾರ ಮೊನೊರೈಲ್ ಮತ್ತು ಮೆಟ್ರೊ ಆರಂಭದ ವಿಚಾರ ಮಾಡಿತ್ತು. ಆದರೆ ಆ ಯೋಜನೆ ಮುಂದುವರೆದಿಲ್ಲ. ಅಂದು ಮೆಟ್ರೋ ಯೋಜನೆ ಆರಂಭಗೊಂಡಿದ್ದರೆ ಇಂದು ಈ ಸ್ಥಿತಿ ಉಧ್ಭವಿಸುತ್ತಿರಲಿಲ್ಲ. ಬಿಜೆಪಿ ಸರ್ಕಾರವು ಅಟಲ್ ಸೇತು ಮತ್ತು ಜುವಾರಿ ಸೇತುವೆಯನ್ನು ನಿರ್ಮಾಣ ಮಾಡಿದ್ದರಿಂದ ಅಷ್ಟೊಂದು ವಾಹನ ದಟ್ಟಣೆ ಸಮಸ್ಯೆ ಗೊತ್ತಾಗುತ್ತಿಲ್ಲ ಎಂಬ ಮಾಹಿತಿ ನೀಡಿದರು.
ಸರ್ಕಾರವು ಸಲಹಾಗಾರರನ್ನು ನೇಮಿಸಿ ಈ ಯೋಜನೆಯ ಸಂಪೂರ್ಣ ಪಟ್ಟಿ ಸಿದ್ಧಪಡಿಸಿದೆ. ಇದಕ್ಕೆ ಕೇಂದ್ರ ಸರ್ಕಾರದ ಸಹಾಯ ಅಗತ್ಯವಿದೆ. ಇದಕ್ಕೆ ಕೇಂದ್ರದ ಬಳಿ ಆಘ್ರಹಿಸಲಾಗುವುದು. ಮುಂಬರುವ ಆರ್ಥಿಕ ವರ್ಷದಲ್ಲಿ ಮೆಟ್ರೊ ಯೋಜನೆಯ ಪೂರ್ವ ತಯಾರಿ ಪೂರ್ಣಗೊಂಡರೆ ಕೆಲವೇ ವರ್ಷಗಳಲ್ಲಿ ಗೋವಾದಲ್ಲಿ ಮೆಟ್ರೊ ಆರಂಭಗೊಳ್ಳಲಿದೆ. ಬಜೇಟ್ ಪೂರ್ವ ಬೈಠಕ್ ನಲ್ಲಿ ಈ ಪ್ರಸ್ತಾವವನ್ನು ಮಂಡಿಸಲಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.