ಸುದ್ಧಿಕನ್ನಡ ವಾರ್ತೆ
Goa: ಗೋವಾ ರಾಜಧಾನಿ ಪಣಜಿಯಲ್ಲಿ ಸ್ಮಾರ್ಟ ಸಿಟಿ  (Panaji Smart City) ಮಿಶನ್ ಅಡಿಯಲ್ಲಿ ಸಿದ್ಧವಾಗುತ್ತಿರುವ ಪಾರ್ಕಿಂಗ್ ಸ್ಥಳದಲ್ಲಿ ಇವಿ ಚಾರ್ಜಿಂಗ್ ಸ್ಟೇಶನ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಸದ್ಯ ಸಾಂತಿನೇಜ್ ನಲ್ಲಿ ಈ ಸೌಲಭ್ಯದ ಸಿದ್ಧತಾ ಕಾರ್ಯ ನಡೆಯುತ್ತಿದೆ. ಪಣಜಿ ಸ್ಮಾರ್ಟ ಸಿಟಿ ಮಹಾನಗರದಲ್ಲಿ 40 ಇವಿ ಚಾರ್ಜಿಂಗ್ ಸ್ಟೇಶನ್ ನಿರ್ಮಾಣವಾಲಿದೆ.

ಗೋವಾ ರಾಜಧಾನಿ ಪಣಜಿಯಲ್ಲಿ ಸ್ಮಾರ್ಟಸಿಟಿ ಯೋಜನೆಯ ಕಾಮಗಾರಿ ಭರದಿಂದ ಸಾಗಿದ್ದು, ಈ ಕಾಮಗಾರಿಯಿಂದಾಗಿ ಹೆಚ್ಚಿನ ಸ್ಥಳಗಳಲ್ಲಿ ಧೂಳು ಆವರಿಸಿದೆ.

ಈವಿ ವಾಹನಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತಿರುವ ಹಿನ್ನೆಲೆಯಲ್ಲಿ ಸ್ಮಾರ್ಟ ಸಿಟಿಯ ಅಲ್ಲಲ್ಲಿ ಚಾರ್ಜಿಂಗ್ ಸ್ಟೇಶನ್ ನಿರ್ಮಾಣಮಾಡಲಾಗುತ್ತಿದೆ.ಸದ್ಯ ಸಾಂತನೇಜ್ ಹಾಗೂ ಕಾಂಪಾಲ್ ಸ್ಟೇಡಿಯಂ ಬಳಿ, ಠಾಕೂರ್ ಪೆಟ್ರೋಲ್ ಬಂಕ್ ಬಳಿ ಚಾರ್ಜಿಂಗ್ ಸ್ಟೇಶನ್ ನಿರ್ಮಾಣವಾಗುತ್ತಿದೆ.