ಸುದ್ಧಿಕನ್ನಡ ವಾರ್ತೆ
Goa Beech Wedding: ಗೋವಾ ರಾಜ್ಯಗಳ ಬೀಚ್ ಗಳು ಪ್ರವಾಸೋದ್ಯಮಕ್ಕೆ ಮಾತ್ರವಲ್ಲದೆಯೇ ಬೀಚ್ ವೆಡ್ಡಿಂಗ್ ಗೆ (Beech Weddin) ಪ್ರಸಿದ್ಧಿ ಪಡೆದಿದೆ. ಗೋವಾದಲ್ಲಿ ದೇಶೀಯ ಮಾತ್ರವಲ್ಲದೆಯೇ ವಿದೇಶಿಯ ಜೋಡಿಗಳು ಕೂಡ ಗೋವಾ ಬೀಚ್ ವೆಡ್ಡಿಂಗ್ ಗೆ ಆಕರ್ಷಿತರಾಗಿದ್ದಾರೆ. ಹಲವು ಜನ ಭಾರತೀಯರೇ ವಿದೇಶಿ ಪದ್ಧತಿ ಅನುಸರಿಸುತ್ತಿರುವುದನ್ನು ಕಾಣುವ ನಾವು ವಿದೇಶಿಗರು ಭಾರತೀಯ ಪದ್ಧತಿಯಲ್ಲಿ ವಿವಾಹವಾಗುತ್ತಿರುವುದು ಅವರಿಗೆ ಭಾರತೀಯರ ಸಂಪ್ರದಾಯದ ಬಗ್ಗೆ ಇರುವ ಆಸ್ತಿಯನ್ನು ತೋರಿಸುತ್ತದೆ.

ಗೋವಾ ರಾಜ್ಯವು ಜಗತ್ಪ್ರಸಿದ್ದ ಪ್ರವಾಸಿ ತಾಣವಾಗಿದ್ದು ದೇಶ ವಿದೇಶೀಯ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ. ಇದರಿಂದಾಗಿಯೇ ಗೋವಾ ಬೀಚ್ ವೆಡ್ಡಿಂಗ್ ಕೂಡ ಹೆಚ್ಚಿನ ಪ್ರಸಿದ್ಧಿ ಪಡೆದಿದೆ. ಗೋವಾದಲ್ಲಿ ಪ್ರತಿ ವರ್ಷ ಹಲವು ಬೀಚ್ ವೆಡ್ಡಿಂಗ್ ನಡೆಯುತ್ತಿರುವುದು ಇದಕ್ಕೆ ಉದಾಹರಣೆಯಾಗಿದೆ.

ವಿದೇಶಿ ಜೋಡಿಗಳು ಗೋವಾದಲ್ಲಿ ಭಾರತೀಯ ಪದ್ಧತಿಯಲ್ಲಿ ಭಾರತೀಯ ಸಂಪ್ರದಾಯದಂತೆ ಮದುವೆಯಾಗುತ್ತಿರುವುದು ವಿದೇಶಿಯರಿಗೆ ಭಾರತೀಯ ಸಂಪ್ರದಾಯಗಳ ಬಗ್ಗೆ ಇರುವ ಆಸಕ್ತಿಯನ್ನು ತೋರಿಸುತ್ತದೆ. ವಿದೇಶಿಗರು ನಮ್ಮ ಸಂಪ್ರದಾಯದ ಬಗ್ಗೆ ಆಸಕ್ತಿ ತೋರುತ್ತಿರುವಾಗ ಭಾರತೀಯರು ನಮ್ಮ ಸಂಪ್ರದಾಯ ಉಳಿಸಿ ಮುಂದುವರೆಸಿಕೊಂಡು ಹೋಗುವ ಅಗತ್ಯವಿದೆ.