ಸುದ್ಧಿಕನ್ನಡ ವಾರ್ತೆ
Goa: ರಾಕಿಂಗ್ ಸ್ಟಾರ್ ಯಶ್ ರವರಿಗೆ ಜನವರಿ 8 ಇಂದು 39 ನೇಯ ವರ್ಷದ ಹುಟ್ಟುಹಬ್ಬದ ಸಂಭ್ರಮವಾಗಿದ್ದು , ಪತ್ನಿ ರಾಧಿಕಾ ಹಾಗೂ ತಮ್ಮ ಆಪ್ತರೊಂದಿಗೆ ಗೋವಾದಲ್ಲಿ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಗೋವಾದಲ್ಲಿ ಜನವರಿ 7 ರ ಮಧ್ಯರಾತ್ರಿ ಯಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪತ್ನಿ ರಾಧಿಕಾ ಮತ್ತು ತಮ್ಮ ಮಕ್ಕಳೊಂದಿಗೆ ಯಶ್ ತಮ್ಮ ಹುಟ್ಟುಹಬ್ವನ್ನು ಸಂಭ್ರವಿಸಿದ್ದಾರೆ. ಯಶ್ ಆಪ್ತ ಪಾನಿಪುರಿ ಕಿಟ್ಟಿ, ಕೆವಿ ಎನ್ ಸಂಸ್ಥೆಯ ರೂವಾರಿ ವೆಂಕಟೇಶ್ ಸೇರಿದಂತೆ ಅನೇಕರು ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ತಾನು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ. ಅಭಿಮಾಮಿಗಳು ನೀವು ಇರುವ ಕಡೆಯಿಂದಲೇ ಹಾರೈಸಿ ಎಂದು ತಿಳಿಸಿದ್ದರು. ಇದೀಗ ಗೋವಾದಲ್ಲಿ ಸರಳವಾಗಿ ಹಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ಕೊಟ್ಟಿದ್ದಾರೆ.