ಸುದ್ಧಿಕನ್ನಡ ವಾರ್ತೆ
ಪಣಜಿ: ಪ್ರಸಕ್ತ ವರ್ಷ ನಮಗೆಲ್ಲ ಸಂತೋಷದ ವಿಷಯ. ಗೋವಾದಲ್ಲಿ ಕನ್ನಡ ಭವನ ನಿರ್ಮಾಣದ ಕನಸು ನನಸಾಗುವ ಹಂತದಲ್ಲಿದೆ. ಕಳೆದ ಕೆಲ ದಿನಗಳಿಂದ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಜಾಗವನ್ನು ಹುಡುಕುತ್ತಿದೆದೀ ನಿಟ್ಟಿನಲ್ಲಿ ವಿವಿಧ ಕನ್ನಡ ಸಂಘಟನೆಗಳು ತಮ್ಮ ಅಭಿಪ್ರಾಯ ಮಂಡಿಸುತ್ತಿದ್ದಾರೆ. ಕನ್ನಡ ಭವನ ನಿರ್ಮಾಣಕ್ಕೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಅಂದಾಗ ಯಶಸ್ಸಿಯಾಗಲು ಸಾಧ್ಯ ಎಂದು ರಾಷ್ಟ್ರೀಯ ಬಂಜಾರ ಪರಿಷತ್ ಉಪಾಧ್ಯಕ್ಷ ಹಾಗೂ ಅಖಿಲ ಗೋವಾ ಬಂಜಾರ ಸಮೀತಿ ಅಧ್ಯಕ್ಷ ಸುರೇಶ್ ರಜಪೂತ್ ಅಭಿಪ್ರಾಯಪಟ್ಟರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು- ಗೋವಾದಲ್ಲಿ ಕಳೆದ ಹಲವು ದಶಕಗಳಿಂದ ನಾವೆಲ್ಲ ವಾಸಿಸುತ್ತಿದ್ದೇವೆ. ಕಳೆದ ಹಲವು ವರ್ಷಗಳಿಂದ ಗೋವಾದಲ್ಲಿ ಕನ್ನಡ ಭವನಕ್ಕಾಗಿ ನಾವೆಲ್ಲ ಹೋರಾಟ ನಡೆಸುತ್ತಾ ಬಂದಿದ್ದೇವೆ. ಅನಗತ್ಯವಾಗಿ ನಾವು ಹೇಳಿಕೆ ನೀಡುವುದು ಸರಿಯಲ್ಲ. ಕನ್ನಡ ಭವನ ನಿರ್ಮಾಣಕ್ಕೆ ಎಲ್ಲ ಕನ್ನಡ ಸಂಘಟನೆಗಳೂ ಕೈಜೋಡಿಸಬೇಕು ಎಂದಾಗ ಹೆಚ್ಚಿನ ಯಶಸ್ಸು ಲಭಿಸಲು ಸಾಧ್ಯ. ಕನ್ನಡ ಭವನಕ್ಕಾಗಿ ಹೋರಾಟ ನಡೆಸುತ್ತಿರುವವರಿಗೆ ಸಾಧ್ಯವಾದರೆ ಎಲ್ಲರೂ ಬೆಂಬಲ ನೀಡಬೇಕು ಎಂದು ಸುರೇಶ್ ರಜಪೂತ್ ಅಭಿಪ್ರಾಯಪಟ್ಟರು.