ಸುದ್ಧಿಕನ್ನಡ ವಾರ್ತೆ
ಪಣಜಿ: ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ದೇವೇಂದ್ರ ಫಡ್ನವೀಸ್ ಇದೀಗ ಪ್ರಪ್ರಥಮವಾಗಿ ಗೋವಾಕ್ಕೆ ಆಗಮಿಸಿದ್ದಾರೆ. ಮಂಗಳವಾರ ರಾತ್ರಿ ಅವರು ಗೋವಾದ ದಾಬೋಲಿಂ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಫಡ್ನವೀಸ್ ರವರನ್ನು ಸಚಿವ ಮಾವಿನ್ ಗುದಿನ್ಹೊ ಸ್ವಾಗತ ಕೋರಿದರು.
ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ದೇವೇಂದ್ರ ಫಡ್ನವೀಸ್ ರವರು ಇದೇ ಪ್ರಪ್ರಥಮಬಾರಿಗೆ ಗೋವಾಕ್ಕೆ ಆಗಮಿಸಿದ್ದಾರೆ. ಅವರೊಂದಿಗೆ ಮಧ್ಯಪ್ರದೇಶದ ಮಂತ್ರಿ ಕೈಲಾಶ ವಿಜಯವರ್ಗೀಯ ರವರು ಕೂಡ ಗೋವಾಕ್ಕೆ ಆಗಮಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕ ಅಭೂತಪೂರ್ವ ಜಯಕ್ಕೆ ಮಾವಿನ್ ಗುದಿನ್ಹೊ ರವರು ಫಡ್ನವೀಸ್ ರವರನ್ನು ಅಭಿನಂದಿಸಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರವರ ದಿಢೀರ್ ಗೋವಾ ಭೇಟಿ ಕುತೂಹಲ ಮೂಡಿಸಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿಗೆ ಬಹುಮತ ಲಭಿಸಿದ ನಂತರ ಡಿಸೆಂಬರ್ 5 ರಂದು ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ, ಏಕನಾಥ ಶಿಂಧೆ ಹಾಗೂ ವಿಜಯ್ ಪವಾರ್ ರವರು ಉಪಮುಖ್ಯಮಂತ್ರಿಯಾಗಿ ಪ್ರಮಾನವಚನ ಸ್ವೀಕರಿಸಿದರು. ಡಿಸೆಂಬರ್ 8 ಮತ್ತು 9 ರಂದು ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲಾಗಿತ್ತು. ಇದರಲ್ಲಿ ರಾಹುಲ್ ನಾರ್ವೇಕರ್ ರವರನ್ನು ಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.