ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಮೋಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ ರನ್ ವೆ ಬದಲಾಗಿ ಟ್ಯಾಕ್ಸಿ ವೇ ದಿಂದ ಟೇಕ್ ಅಪ್ ಆಗಲು ಪ್ರಯತ್ನಿಸಿದ ಘಟನೆ ನಡೆದಿದ್ದು ಅದೃಷ್ಠವಶಾತ್ ದೊಡ್ಡ ಅವಘಡ ತಪ್ಪಿದಂತಾಗಿದೆ. ಕಳೆದ ಗುರುವಾರ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಲಭ್ಯವಾದ ಮಾಹಿತಿಯ ಅನುಸಾರ-ಏರ್ ಇಂಡಿಯಾ ಫೈಲಟ್ ತಪ್ಪಿ ರನ್ ವೇ ಬದಲಾಗಿ ಟ್ಯಾಕ್ಸಿವೇ ದಿಂದ ಟೇಕ್ ಅಪ್ ಆಗಲು ಪ್ರಯತ್ನಿಸಿದ್ದ ಆದರೆ ಕೂಡಲೆ ಏರ್ ಟ್ರಾಫಿಕ್ ಕಂಟ್ರೋಲ್ ಈ ತಪ್ಪು ಕಂಡುಹಿಡಿದು ಕೂಡಲೆ ಫೈಲಟ್ ಗಮನಕ್ಕೆ ತಂದಿದ್ದರಿಂದ ದೊಡ್ಡ ಅಪಘಾತ ತಪ್ಪಿದಂತಾಗಿದೆ.

ಏರ್ ಇಂಡಿಯಾ ವಿಮಾನವು ಗೋವಾದಿಂದ ಹೈದರಾಬಾದ್ ಪ್ರವಾಸಕ್ಕೆ ಸಿದ್ಧವಾಗಿತ್ತು. ಈ ವಿಮಾನವು ಏರ್ ಬಸ್ ಪ್ರಕಾರದ್ದಾಗಿತ್ತು. ಫೈಲಟ್ ರನ್ ವೆ ಬದವಾಗಿ ಟ್ಯಾಕ್ಸಿವೇದಿಂದ ವಿಮಾನವನ್ನು ಟೇಕ್ ಅಪ್ ಮಾಡಲು ಪ್ರಯತ್ನಿಸಿದ. ಟೇಕ್ ಅಪ್ ಆಗುವ ವೇಳೆ ವಿಮಾನದ ವೇಗ 100 ನಾಟ್ಸಗಿಂತ ಹೆಚ್ಚಾಗಿತ್ತು. ವಿಮಾನ ಟೇಕ್ ಅಪ್ ಆಗುವ ಪ್ರಯತ್ನದಲ್ಲಿದ್ದಾಗ ಕೂಡಲೆ ವಿಮಾನ ಸಾರಿಗೆ ನಿಯಂತ್ರಕರು ತ್ವರಿತವಾಗಿ ಫೈಲಟ್ ಗೆ ಸೂಚನೆ ನೀಡಿದರು. ಫೈಲಟ್ ಕೂಡಲೇ ವಿಮಾನ ಟೇಕ್ ಅಪ್ ಆಗುವುದನ್ನು ಸುರಕ್ಷಿತವಾಗಿ ನಿಲ್ಲಿಸಿದರು.

ನಂತರ ವಿಮಾನವನ್ನು ರನ್ ವೆ ಬಳಸಿಕೊಂಡು ಟರ್ಮಿನಲ್ ಗೆ ತರಲಾಯಿತು. ಏರ್ ಇಂಡಿಯಾ ಈ ವಿಮಾನ ಹಾರಾಟವನ್ನು ರದ್ಧುಗೊಳಿಸಿತು. ಭಾರತೀಯ ವಿಮಾನಯಾನ ಇಲಾಖೆಯು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಈ ಘಟನೆಯ ಸವಿಸ್ತಾರ ಮಾಗಹಿತಿಯನ್ನು ಇಲಾಖೆಯು ಕೇಳಿದೆ ಎನ್ನಲಾಗಿದೆ.