ಸುದ್ಧಿಕನ್ನಡ ವಾರ್ತೆ
ಪಣಜಿ(ವಾಸ್ಕೊ): ಕಲ್ಯಾಣ ಕರ್ನಾಟಕ ಪ್ರತಿಷ್ಠಾನದಿಂದ ಹಮ್ಮಿಕೊಳ್ಳಲಾಗಿದ್ದ ಅಕ್ಷರಜ್ಯೋತಿಯಾತ್ರೆ ಗೋವಾದ ವಾಸ್ಕೊ ಶ್ರೀ ಯಲ್ಲಾಲಿಂಗೆಶ್ವರ ಶಾರದಾ ಮುಂದಿರ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು ಪ್ರತಿಷ್ಠಾನದ ಅಧ್ಯಕ್ಷರದ ಬಸವಕುಮಾರ ಪಾಟೀಲರವರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಭೋದನೆ ಮಾಡಿದರು ಆದರ್ಶ ವಿದ್ಯಾರ್ಥಿ ಗಳಾಗಲು ಏನು ಮಾಡಬೇಕು…? ವಿದ್ಯಾರ್ಥಿಗಳು ಹೇಗೆ ದೇಶಾಭಿಮಾನ ಹೊಂದಬೇಕು ಮತ್ತು ಹೇಗೆ ಅಭ್ಯಾಸಮಾಡಿದರೆ ಪರೀಕ್ಷೆಯಲ್ಲಿ ಯಶಸ್ಸು ಸಿಗುತ್ತದೆ ಎಂದು ವಿಸ್ತಾರವಾಗಿ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಜೀವನ ಯಶಸ್ವಿಯಾದಾಗ ಮಾತ್ರ ಜೀವನದಲ್ಲಿ ಗುರಿತಲುಪಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಶಾಲೆಯ ಹಿರಿಯ ಶಿಕ್ಷಕಿಯಾದ ಸುನಿತಾ ಸುಕುಮಾರಿ ಮಾತನಾಡಿ ಇಂತಹಕಾರ್ಯಕ್ರಮದ ಅವಶ್ಯಕತೆ ನಮ್ಮ ವಿದ್ಯಾರ್ಥಿಗಳಿಗೆ ಇತ್ತು ಇಂತಹ ಸಂದರ್ಭದಲ್ಲಿ ಅಕ್ಷರ ಜ್ಯೊತಿ ಯಾತ್ರೆ ನಮ್ಮ ಶಾಲೆಗೆ ಬಂದಿದ್ದು ಬಹಳ ಖುಷಿಯಾಗಿದೆ ಮತ್ತು ನಮ್ಮ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಲಿದೆ ಎಂದರು.

ಕನ್ನಡ ಸಂಘ ಜುವಾರಿ ನಗರದ ಅಧ್ಯಕ್ಷರಾದ ಶಿವಾನಂದ ಬಿಂಗಿ ಮಾತನಾಡಿ- ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆಸ್ಪೂರ್ತಿ ತುಂಬಲು ಇಂತಹ ಕಾರ್ಯಾಗಾರ ಮಾಡುತ್ತಿರುವದ ರಿಂದ ವಿದ್ಯಾರ್ಥಿಗಳ ಮನೋಬಲ ಹೆಚ್ಚುತ್ತದೆ ಮತ್ತು ಮುಂಬರುವ ಪರೀಕ್ಷೆಗಳಿಗೆ ಮಾನಸಿಕವಾಗಿ ಸಿದ್ದಗೊಳ್ಳಲು ಕಾರ್ಯಕ್ರಮ ಸ್ಪೂರ್ತಿಯಾಗಿತ್ತು ಎಂದರು. ಇಂತಹ ಸೇವೆ ನಿಡುತ್ತಿರುವ ಬಸವಕುಮಾರ ಪಾಟಿಲರ ಸೇವೆ ಅಗಾದ. ಗೋವಾದಲ್ಲಿನ ಕನ್ನಡ ಶಾಲೆ ಗಳಲ್ಲಿನ ವಿದ್ಯಾರ್ಥಿಗಳು ಒಳ್ಳೆಯ ಅಂಕಪಡೆದು ಉಜ್ಜವಲವಾದಭವಿಷ್ಯ ಹೊಂದಲಿ. ಒಳ್ಳೆಯ ಕಲಿಕಾ ಮಾಗ9ದಿಂದ ಮಾತ್ರ ಒಳ್ಳೆಯ ಆದರ್ಶ ವಿದ್ಯಾರ್ಥಿನಿರ್ಮಾಣಮಾಡಲು ಸಾಧ್ಯ ಎಂದರು ಇದೇ ವೇಳೆ ಕನ್ನಡ ಉಳುವಿಗಾಗಿ ಕನ್ನಡ ಬೆಳೆಸಲು ಶ್ರಮಿಸುತ್ತಿರವ ಶಿಕ್ಷಕರಿಗೆ ಧನ್ಯವಾದ ತಿಳಿಸಿದರು.

ಈ ಸದರ್ಭದಲ್ಲಿ ಕನ್ನಡ ಶಾಲಾ ಹಿರಿಯ ಶಿಕ್ಷಕರಾದ ವಿ ಟಿ ಅರಬೆಂಚಿ ಕನ್ನಡ ಸಂಘ ಜುವ ನಗರದ ಕಾರ್ಯದರ್ಶಿ ದಾವಲ್ ಸಾಬ್ ನದಾಫ್ ಕನ್ನಡ ಸಂಘದ ಸಹ ಕಾರ್ಯದರ್ಶಿ ಸಿದ್ಧನಗೌಡ ಗೌಡ ಗೌಡರ ಮತ್ತು ಎಸ್ ಟಿ ಮ್ಯಾಗೇರಿ, ಉದಯ್ ಕುಮಾರ್ ಭಗವತಿ, ಶಿಕ್ಷಕಿ ವಿದ್ಯಾ, ಶಿವಾನಿ, ಶ್ರೀಮತಿ ಗೌಡರ್, ಮತ್ತು ಮಲ್ಲಿಕಾರ್ಜುನ್ ನರಹಟ್ಟಿ ಉಪಸ್ಥಿತ್ ಉಪಸ್ಥಿತರಿದ್ದರು.