ಸುದ್ಧಿಕನ್ನಡ ವಾರ್ತೆ
Goa: ಗೋವಾಕ್ಕೆ ಬಂದ ವಿದೇಶಿ ಮಹಿಳಾ ಪ್ರವಾಸಿಗರ ಆಕ್ಷೇಪಾರ್ಹ ವೀಡಿಯೋ ಮಾಡಿ ತೊಂದರೆ ನೀಡುತ್ತಿದ್ದ ಯೂಟೂಬರ್ ತೊಂದರೆಗೆ ಸಿಲುಕಿದ್ದಾರೆ. ಈ ಪ್ರಕರಣದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೊ ವೈರಲ್ ಆದ ನಂತರ ಗೋವಾ ಪೋಲಿಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.
ಈ ಯೂಟೂಬರ್ ಗೋವಾದಲ್ಲಿನ ವಿವಿಧ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ ಮಾಡಿದ ನಂತರ ನಾಗರೀಕರು ದೂರಿದ್ದರು.
ಈ ಪ್ರಕರಣದಲ್ಲಿ ಹಿಂಧುತ್ವ ನಾಯಿಟ್ ಎಂಬ ಎಕ್ಸ ಅಕೌಂಟ್ ನಲ್ಲಿ ಒಂದು ವೀಡಿಯೊ ಮತ್ತು ಹಲವು ಪೋಟೊಗಳನ್ನು ಶೇರ್ ಮಾಡಲಾಗಿತ್ತು. ಈ ವ್ಯಕ್ತಿ ಬಾಂಗ್ಲಾದೇಶಿಯವನಾಗಿದ್ದು, ಈತ ಗೋವಾಜಕ್ಕೆ ಬಂದಿದ್ದ ವಿದೇಶಿ ಮಹಿಳಾ ಪ್ರವಾಸಿಗರಿಗೆ ತೊಂದರೆ ನೀಡುತ್ತಿರುವುದಾಗಿ ಈ ಪೋಸ್ಟನಲ್ಲಿ ಆರೋಪಿಸಲಾಗಿತ್ತು. ಪೋಲಿಸರು ಈ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸುವಂತೆ ಈ ಪೋಸ್ಟ ಮೂಲಕ ಆಘ್ರಹಿಸಲಾಗಿತ್ತು.
ಈ ಯೂಟುಬರ್ ಹೆಸರು ಮಿಜಾನ್ ಖಾನ್ ಎಂದಾಗಿದೆ. ಮಿಜಾನ್ ಲೈಫ್ ಸ್ಟೋರಿ ವ್ಲೋಗ್ ಎಂಬ ಹೆಸರಿನ ಯೂಟೂಬ ಚಾನಲ್ ಇದೆ. ಈ ಚಾನಲ್ ನಲ್ಲಿ 652 ವೀಡಿಯೊ ಅಪ್ ಲೋಡ್ ಮಾಡಲಾಗಿದೆ. ಈ ಚಾನಲ್ ಗೆ 761 ಫಲೊವರ್ಸ ಇದ್ದು, ಹೆಚ್ಚಿನ ವೀಡಿಯೊಗಳು ಗೋವಾದ ವೀಡಿಯೋಗಳೇ ಆಗಿದೆ. ಹಲವು ವೀಡಿಯೊಗಳಲ್ಲಿ ಗೋವಾದ ಬೀಚ್ ಮತ್ತು ವಿದೇಶಿ ಪ್ರವಾಸಿಗರನ್ನು ತೋರಿಸಿ ಅವರೊಂದಿಗೆ ಸಂವಾದ ನಡೆಸಲಾಗಿದೆ. ಈ ವೀಡಿಯೊದಲ್ಲಿ ವಿದೇಶಿ ಮಹಿಳೆಯರೊಂದಿಗೆ ಅಶ್ಲೀಲವಾಗಿ ಮಾತನಾಡಿ ಈತ ತೊಂದರೆ ನೀಡಿರುವುದಾಗಿ ಆರೋಪಿಸಲಾಗಿದೆ.