ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ 55 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭಗೊಂಡಿದೆ. ಕಲಾವಿದ ಸುದರ್ಶನ್ ಪಟನಾಯಿಕ್ ರವರು ಗೋವಾ ರಾಜಧಾನಿ ಪಣಜಿ ಸಮೀಪದ ಮೀರಾಮಾರ್ ಬೀಚ್ ನಲ್ಲಿ ಚಲನಚಿತ್ರ ಕ್ಷೇತ್ರದ ದಿಗ್ಗಜ ಕಲಾವಿದರನ್ನು ಸ್ಯಾಂಡ್ ಆರ್ಟ ಮೂಲಕ ಚಿತ್ರಿಸಿದ್ದು ಎಲ್ಲರನ್ನೂ ಆಕರ್ಷಿಸಿದೆ.

ಗೋವಾದಲ್ಲಿ ಚಲನಚಿತ್ರೋತ್ಸವದ ಹಿನ್ನೆಲೆಯಲ್ಲಿ ಅತ್ಯಾಕರ್ಷಣೀಯ ಕಟೌಟ್ ಮತ್ತು ಲೈಟಿಂಗ್ಸ ಹಾಕಲಾಗಿದೆ. ಇದೀಗ ಮೀರಾಮಾರ್ ಬೀಚ್ ನಲ್ಲಿ ಕಲಾವಿದ ಸುದರ್ಶನ್ ಪಟನಾಯಿಕ್ ರವರು ಸ್ಯಾಂಡ್ ಆರ್ಟ ಮೂಲಕ ಅತ್ಯಾಕರ್ಷಣೀಯವಾಗಿ ಕಲಾವಿದರನ್ನು ಚಿತ್ರಿಸಿರುವುದು ಎಲ್ಲರ ಗಮನ ಸೆಳೆಯುತ್ತಿದೆ.