ಸುದ್ಧಿಕನ್ನಡ ವಾರ್ತೆ
Goa: ಕಳೆದ 18 ವರ್ಷಗಳ ಹಿಂದೆ ಗೋವಾದಲ್ಲಿ 13 ವರ್ಷದ ಬಾಲಕಿಯನ್ನು ಹತ್ಯೆ ಮಾಡಿ ಆಕೆಯ ಮೃತದೇಹವನ್ನು ತುಂಡು ತುಂಡಾಗಿಸಿ ವಿಕೃತಿ ಮೆರೆದ ಆರೋಪಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಗೌರವಯುತವಾಗಿ ತಮ್ಮ ಮಗಳ ಅಂತ್ಯಸಂಸ್ಕಾರ ನಡೆಯಬೇಕು ಎಂಬುದು ಆಕೆಯ ತಂದೆ ತಾಯಿಯ ಇಚ್ಚೆಯಾಗಿತ್ತು.
ಇದಕ್ಕಾಗಿ ಕೊಲೆಯಾದ ಬಾಲಕಿಯ ತಂದೆತಾಯಿ ಕೋರ್ಟ ಮೆಟ್ಟಿಲೇರಿದ್ದರು. 16 ವರ್ಷಗಳ ಹಿಂದೆ ಜಫ್ತಿ ಮಾಡಿದ್ದ ತಮ್ಮ ಮಗಳ ತಲೆಬುರುಡೆಯನ್ನು ಕೋರ್ಟನಲ್ಲಿ ಹಾಜರುಪಡಿಸಿದ್ದರು. ಕೇರಳದ ಕಾಸರಗೋಡಿನಲ್ಲಿ ಮನೆಗೆಲಸ ಮಾಡುತ್ತಿದ್ದ ಸೋಫಿಯಾ ಎಂಬ ಬಾಲಕಿಯನ್ನು 2006 ರಲ್ಲಿ ಗೋವಾದಲ್ಲಿ ಹತ್ಯೆ ಮಾಡಿ ಮೃತ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆಯಲಾಗಿತ್ತು. 13 ವರ್ಷದ ಸೋಫಿಯಾ ಎಂಬ ಬಾಲಕಿ ಮೂಲತಃ ಕರ್ನಾಟಕದವಳೇ ಆಗಿದ್ದಳು.
ಕಿಚನ್ ನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಸೋಫಿಯಾ ಬೆಂಕಿ ಹತ್ತಿ ಗಂಭೀರವಾಗಿ ಗಾಯಗೊಂಡಿದ್ದಳು. ಆದರೆ ಗುತ್ತಿಗೆದಾರನು ಈಕೆಯನ್ನು ಕೊಲೆ ಮಾಡಿ ನಂತರ ಗೋವಾದಲ್ಲಿ ಈಕೆಯ ಮೃತದೇಹವನ್ನು ಎಸೆಯಲಾಗಿತ್ತು.
ಈ ಘಟನೆಯ ಕುರಿತು ಲಭ್ಯವಾಗಿರುವ ಮಾಹಿತಿಯ ಅನುಸಾರ- ಸೋಫಿಯಾ ಇವಳ ಮೃತದೇಹ 2008 ರಲ್ಲಿ ಗೋವಾದಲ್ಲಿ ಪತ್ತೆಯಾಗಿತ್ತು. 2015 ರಲ್ಲಿ ಆರೋಪಿಯನ್ನು ಬಂಧಿಸಿ ಗೋವಾ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿತ್ತು. ನಂತರ ಕೇರಳ ಉಚ್ಛ ನ್ಯಾಯಾಲಯ 2019 ರಲ್ಲಿ ಈತನಿಗೆ ಜೀವಾವಧಿ ಶಿಕ್ಷೆಗೆ ಬದಲಾಯಿಸಿತ್ತು ಎನ್ನಲಾಗಿದೆ.
ಕರ್ನಾಟಕದ ಕೊಡಗು ಮೂಲ…
ಬಾಲಕಿಯ ಹತ್ಯೆಗೈದ ಆರೋಪಿಗೆ ಶಿಕ್ಷೆಯಾಗಿದೆ. ಆದರೆ ನಮ್ಮ ಮಗಳನ್ನು ಗೌರವಪೂರ್ವಕವಾಗಿ ಅಂತ್ಯಸಂಸ್ಕಾರ ನೆರವೇರಿಸಬೇಕು ಎಂಬುದು ಪಾಲಕರ ಇಚ್ಛೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕದ ಕೊಡಗು ನಿವಾಸಿಗಳಾದ ತಂದೆ ತಾಯಿಗಳು ಕೋರ್ಟ ಮೆಟ್ಟಿಲೇರಿದ್ದರು.
ಪಾಲಕರಿಗೆ ಸಿಕ್ಕ ತಲೆಬುರುಡೆ…!
ಕಾಸರಗೋಡು ಪ್ರಧಾನ ಸತ್ರ ನ್ಯಾಯಾಲಯವು ಮೃತ ಬಾಲಕಿಯ ತಂದೆ ತಾಯಿಗಳ ಬೇಡಿಕೆಯನ್ನು ಮನ್ನಿಸಿ ಸೋಮವಾರ ಬಾಲಕಿಯ ತಲೆ ಬುರುಡೆಯನ್ನು ಪಾಲಕರಿಗೆ ನೀಡಿದೆ ಎನ್ನಲಾಗಿದೆ. ನ್ಯಾಯಾಲಯವು ತಾಯಿ ಆಯಶಾ ಮತ್ತು ತಂದೆ ಮೊಯಿಥು ರವರ ಬಳಿ ತಲೆ ಬುರುಡೆ ಇದ್ದ ಬಾಕ್ಸ ಒಪ್ಪಿಸಿದೆ.
ನಂತರ ತಮ್ಮ ಸಂಬಂಧಿಕರೊಂದಿಗೆ ಮೂಲ ಊರಿಗೆ ತೆರಳಿ ಸೋಮವಾರ ರಾತ್ರಿ ಸ್ಥಳೀಯ ಮಸೀದಿಯಲ್ಲಿ ದಫನ್ ಮಾಡಲಾಗಿದೆ ಎನ್ನಲಾಗಿದೆ.