ಸುದ್ಧಿಕನ್ನಡ ವಾರ್ತೆ
Goa: ರಾಜ್ಯದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರಸಕ್ತ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ಒಟ್ಟು 195 ರಸ್ತೆ ಅಪಘಾತಗಳು ಸಂಭವಿಸಿವೆ. ಇದರಲ್ಲಿ 18 ಜನ ಸಾವನ್ನಪ್ಪಿದ್ದಾರೆ. 13 ಜನರು ಗಂಭೀರವಾಗಿ ಗಾಯಗೊಂಡಿದ್ದು, 34 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಾರಿಗೆ ಇಲಾಖೆ ಇತ್ತೀಚೆಗೆ ಈ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಸಪ್ಟೆಂಬರ್ ತಿಂಗಳಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ನಿಯಮ ಉಲ್ಲಂಘಿಸಿದವರ ವಿರುದ್ಧ ಒಟ್ಟು 12 ಸಾವಿರದ 392 ಚಲನ್ ಗಳನ್ನು ನೀಡಿದ್ದಾರೆ.
195 ರಸ್ತೆ ಅಪಘಾತಗಳಲ್ಲಿ 15 ಅಪಘಾತಗಳು ತೀವ್ರ ಸ್ವರೂಪದ್ದಾಗಿವೆ. ಇದರಲ್ಲಿ ಉತ್ತರ ಗೋವಾದಲ್ಲಿ 10 ಮತ್ತು ದಕ್ಷಿಣ ಗೋವಾದಲ್ಲಿ 5 ಅಪಘಾತಗಳು ಸೇರಿವೆ. 11 ಮಾರಣಾಂತಿಕ ಅಪಘಾತಗಳಲ್ಲಿ 6 ಅಪಘಾತಗಳು ಉತ್ತರ ಗೋವಾದಲ್ಲಿ ಮತ್ತು 5 ಅಪಘಾತಗಳು ದಕ್ಷಿಣ ಗೋವಾದಲ್ಲಿ ಸಂಭವಿಸಿವೆ. 25 ಸಣ್ಣ ಅಪಘಾತಗಳಲ್ಲಿ ಉತ್ತರ ಗೋವಾದಲ್ಲಿ 13 ಮತ್ತು ದಕ್ಷಿಣ ಗೋವಾದಲ್ಲಿ 12 ಅಪಘಾತಗಳು ಸಂಭವಿಸಿವೆ.
195 ರಲ್ಲಿ 144 ಸಣ್ಣ ಅಪಘಾತಗಳಾಗಿವೆ. ಇದರಲ್ಲಿ ಉತ್ತರ ಗೋವಾದಲ್ಲಿ 80 ಮತ್ತು ದಕ್ಷಿಣ ಗೋವಾದಲ್ಲಿ 64 ಅಪಘಾತಗಳು ಸೇರಿವೆ. ರಸ್ತೆ ಅಪಘಾತದಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಉತ್ತರ ಗೋವಾದಿಂದ 13 ಮತ್ತು ದಕ್ಷಿಣ ಗೋವಾದಿಂದ 5 ಮಂದಿ ಸೇರಿದ್ದಾರೆ. 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಉತ್ತರದಿಂದ 8 ಮತ್ತು ದಕ್ಷಿಣದಿಂದ 5 ಮಂದಿ ಗಾಯಗೊಂಡಿದ್ದಾರೆ. 195 ಅಪಘಾತಗಳಲ್ಲಿ ಒಟ್ಟು 34 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದರಲ್ಲಿ ಉತ್ತರ ಗೋವಾದಲ್ಲಿ 18 ಮತ್ತು ದಕ್ಷಿಣ ಗೋವಾದಲ್ಲಿ 16 ಸೇರಿವೆ. ಮೃತಪಟ್ಟ 18 ಮಂದಿಯಲ್ಲಿ 10 ಮಂದಿ ಬೈಕ್ ಸವಾರರು. ಇವರಲ್ಲಿ 7 ಮಂದಿ ಉತ್ತರ ಗೋವಾ ಮತ್ತು 3 ಮಂದಿ ದಕ್ಷಿಣ ಗೋವಾದವರು ಎಂದು ಸಾರಿಗೆ ಇಲಾಖೆ ತಿಳಿಸಿದೆ.